ಬೆಂಗಳೂರು: ಸಿ.ಡಿ.ಅಜಯ್ ಅವರು ಬೌರಿಂಗ್ ಇನ್ಸ್ಟಿಟ್ಯೂಟ್ ಆಶ್ರಯದಲ್ಲಿ ನಡೆದ ಸೀನಿಯರ್ ಪುರುಷರ ರಾಷ್ಟ್ರೀಯ ರ್ಯಾಂಕಿಂಗ್ ಟೆನಿಸ್ ಟೂರ್ನಿಯ ಸಿಂಗಲ್ಸ್ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
ವಿವಿಧ ವಿಭಾಗಗಳ ಫೈನಲ್ ಪಂದ್ಯಗಳ ವಿವರ ಕೆಳಗಿನಂತಿವೆ.
35 ವರ್ಷಕ್ಕೂ ಮೇಲಿನವರ ವಿಭಾಗ: ಸಿಂಗಲ್ಸ್ನಲ್ಲಿ ಸಿ.ಡಿ. ಅಜಯ್ 6–3, 7–5ರಲ್ಲಿ ವೆಂಕಟ ರಾಮ್ ಅವರನ್ನು ಮಣಿಸಿದರು. ಡಬಲ್ಸ್ನಲ್ಲಿ ಸಿ.ಡಿ.ಅಜಯ್ ಮತ್ತು ಎಸ್.ಎನ್. ನಾಗೇಶ್ 6–1, 6–1ರಲ್ಲಿ ಕರಣ್ ಸಿಂಗ್ ಹಾಗೂ ನೀಲಕಂಠ ದಾಮ್ರೆ ಎದುರು ಗೆದ್ದರು.
45 ವರ್ಷಕ್ಕೂ ಮೇಲಿನವರ ವಿಭಾಗ: ಸಿಂಗಲ್ಸ್ನಲ್ಲಿ ಪೀಟರ್ ವಿಜಯ ಕುಮಾರ್ 6–0, 6–4ರಲ್ಲಿ ಅಲಿ ಸಜ್ಜದ್ ಎದುರು ಗೆದ್ದರೆ, ಡಬಲ್ಸ್ನಲ್ಲಿ ಬಿ.ಎನ್.ಎಸ್್. ರೆಡ್ಡಿ ಮತ್ತು ಪೀಟರ್ ವಿಜಯ್ ಕುಮಾರ್ 6–1, 6–0ರಲ್ಲಿ ರಮೀಜ್ ಮತ್ತು ಜಿ.ಪಿ ಬಾಲಾಜಿ ವಿರುದ್ಧ ಗೆದ್ದರು.
55 ವರ್ಷಕ್ಕೂ ಮೇಲಿನವರ ವಿಭಾಗ: ಸಿಂಗಲ್ಸ್ನಲ್ಲಿ ಶ್ರೀನಿವಾಸ ರೆಡ್ಡಿ 2–6, 6–3, 10–6 ರಲ್ಲಿ ಯೋಗೇಶ್ ಎದುರು ಜಯ ಪಡೆ ದರು. ಡಬಲ್ಸ್ನಲ್ಲಿ ರಾಮ ಬಾಬು ಮತ್ತು ಶ್ರೀನಿವಾಸ ರೆಡ್ಡಿ 6–4, 1–6, 10–5ರಲ್ಲಿ ತುಳಸಿರಾಮ್ ಹಾಗೂ ಯೋಗೇಶ್ ಅವರನ್ನು ಸೋಲಿಸಿದರು.
65ವರ್ಷಕ್ಕೂ ಮೇಲ್ಪಟ್ಟವರ ವಿಭಾಗ: ಸಿಂಗಲ್ಸ್ನಲ್ಲಿ ಆರ್.ಐ.ಸಿಂಗ್ 6–2, 7–6 ರಿಂದ ಶ್ಯಾಮ್ ಗಾಯಕ್ವಾಡ್ ಅವರನ್ನು ಮಣಿಸಿದರು. ಡಬಲ್ಸ್ನಲ್ಲಿ ಬಿ. ಅಂಕಯ್ಯ ಮತ್ತು ಆರ್.ಐ. ಸಿಂಗ್ 6–4, 6–3ರಲ್ಲಿ ಮೋಹನ್ ಸಿಂಗ್ ಮತ್ತು ವೆಂಕಟಾಚಲಂ ವಿರುದ್ಧ ಗೆದ್ದರು.