ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲ್ಚಳಕದ ‘ಮೋಡಿಗಾರ’ನ ನಿವೃತ್ತಿ

Last Updated 28 ಜೂನ್ 2016, 0:29 IST
ಅಕ್ಷರ ಗಾತ್ರ

ಈಸ್ಟ್‌ ರುದರ್‌ಫೋರ್ಡ್‌, ಅಮೆರಿಕ (ಎಎಫ್‌ಪಿ/ರಾಯಿಟರ್ಸ್‌): ಲಿಯೊನಲ್‌ ಮೆಸ್ಸಿ... ಈ ಹೆಸರು ಕೇಳಿದರೆ ಸಾಕು ಜಗತ್ತಿನ ಕೋಟ್ಯಂತರ ಫುಟ್‌ಬಾಲ್‌ ಪ್ರೇಮಿಗಳಲ್ಲಿ  ರೋಮಾಂಚನವಾಗುತ್ತದೆ.  ಎದುರಾಳಿ ತಂಡದ ಆಟಗಾರನಿಂದ ಚೆಂಡನ್ನು ಹಿಡಿ ತಕ್ಕೆ ಪಡೆದು ಗುರಿ ಸೇರಿಸುವ ಚಾಣಾಕ್ಷ ತನ ಕಣ್ಣಮುಂದೆ ಬರುತ್ತದೆ.

ಆದರೆ, ಇನ್ನು ಮುಂದೆ ಅಂತರ ರಾಷ್ಟ್ರೀಯ ಪಂದ್ಯಗಳಲ್ಲಿ  ‘ಫುಟ್‌ಬಾಲ್‌ ಮಾಂತ್ರಿಕ’ನ ಆಟದ ಸೊಬಗು ನೆನಪು ಮಾತ್ರ. ಏಕೆಂದರೆ ಅರ್ಜೆಂಟೀನಾದ ಮೆಸ್ಸಿ ಭಾನುವಾರ ರಾತ್ರಿ ಅಂತರ ರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಹೇಳಿ ದ್ದಾರೆ. ಅದೂ ಅತ್ಯಂತ ನೋವಿನಿಂದ.

ಪ್ರತಿಷ್ಠಿತ ಟೂರ್ನಿಗಳಲ್ಲಿ ಒಂದಾದ ಕೊಪಾ ಅಮೆರಿಕ ಫುಟ್‌ಬಾಲ್‌ ಟೂರ್ನಿ ಯ ಫೈನಲ್‌ನಲ್ಲಿ ಅರ್ಜೆಂಟೀನಾ ತಂಡ  ಚಿಲಿ ವಿರುದ್ಧ ಮುಗ್ಗರಿಸಿದೆ. ಈ ವೇಳೆ ಯಂತೂ ಅರ್ಜೆಂಟೀನಾದ ಅಭಿಮಾನಿ ಗಳಲ್ಲಿ ಹೃದಯ ಕಿತ್ತು ಬಂದ ಅನುಭವ.

ಆ ದೇಶದ ಕೋಟ್ಯಂತರ ಅಭಿ ಮಾನಿಗಳು  ಸಾಕಷ್ಟು ನಿರೀಕ್ಷೆ ಇಟ್ಟು ಕೊಂಡಿದ್ದ ಮೆಸ್ಸಿ ಮಹತ್ವದ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲು ಗಳಿ ಸುವ ಯತ್ನದಲ್ಲಿ ವಿಫಲರಾದರು. ಆದ್ದ ರಿಂದ ಫಾರ್ವರ್ಡ್‌ ಆಟಗಾರ ಮೆಸ್ಸಿ ನಿವೃತ್ತಿ ಹೇಳಿದ್ದಾರೆ.

ಅರ್ಜೆಂಟೀನಾ ತಂಡ 2014ರಿಂದ ಪ್ರಮುಖ ಮೂರು ಟೂರ್ನಿಗಳಲ್ಲಿ ಫೈನಲ್‌ ಪ್ರವೇಶಿಸಿ ನಿರಾಸೆ ಕಂಡಿದೆ. ಅದರಲ್ಲಿ ಫಿಫಾ ವಿಶ್ವಕಪ್‌ ಕೂಡ ಒಂದು. ಎರಡು ಬಾರಿ ಕೊಪಾ ಅಮೆರಿಕ ಟೂರ್ನಿ ಯಲ್ಲಿಯೇ ಸೋತಿದೆ. ಇದು ಮೆಸ್ಸಿ ಅವ ರಿಗೆ ಸಾಕಷ್ಟು ನೋವುಂಟು ಮಾಡಿದ್ದೇ ನಿವೃತ್ತಿಗೆ ಕಾರಣವಾಗಿದೆ. ಈ ವಿಷಯ ವನ್ನು ಮೆಸ್ಸಿ ಅವರೇ ಬಹಿರಂಗ ಪಡಿಸಿದ್ದಾರೆ.

‘ಇದು ನನ್ನ ಜೀವನದ ಅತ್ಯಂತ ಕಠಿಣ ಸಂದರ್ಭ. ನಿವೃತ್ತಿಯ ನಿರ್ಧಾರ ಹೇಳಲು ತುಂಬಾ ಕಷ್ಟವಾಗುತ್ತಿದೆ. ಅರ್ಜೆಂಟೀನಾ ತಂಡದಲ್ಲಿ ಆಡುವ ಅವ ಕಾಶ ಇಂದಿಗೆ ಮುಗಿದು ಹೋಯಿತು’ ಎಂದು ಮೆಸ್ಸಿ ಹೇಳಿದ್ದಾರೆ.

2007ರ ಕೊಪಾ ಅಮೆರಿಕ ಟೂರ್ನಿಯ ಫೈನಲ್‌ನಲ್ಲಿ ಅರ್ಜೆಂಟೀನಾ ತಂಡ ಬ್ರೆಜಿಲ್‌ ವಿರುದ್ಧ ಸೋತಿತ್ತು. ಆಗಲೂ ಮೆಸ್ಸಿ ತಂಡದಲ್ಲಿದ್ದರು.
‘ನನ್ನ ಕೈಯಲ್ಲಿ ಆದ ಎಲ್ಲವನ್ನೂ ಸಾಧಿಸಿದ್ದೇನೆ. ಆದರೆ  ಇತ್ತೀಚಿನ ನಾಲ್ಕು ಕೊಪಾ ಅಮೆರಿಕ ಟೂರ್ನಿಗಳಲ್ಲಿ ಚಾಂಪಿ ಯನ್‌ ಎನಿಸಿಕೊಳ್ಳಲು ಸಾಧ್ಯವಾಗಲಿಲ್ಲ.  ಇದು ನನಗೆ ತುಂಬಾ ಬೇಸರವುಂಟು ಮಾಡಿದೆ’ ಎಂದು ಎರಡು ದಿನಗಳ ಹಿಂದೆಯಷ್ಟೇ 29ನೇ ವಸಂತಕ್ಕೆ ಕಾಲಿಟ್ಟಿರುವ ಮೆಸ್ಸಿ ಹೇಳಿದ್ದಾರೆ.

ನಿಗದಿತ ಸಮಯದ ಅಂತ್ಯಕ್ಕೆ ಪಂದ್ಯ ಗೋಲು ರಹಿತವಾಗಿ ಡ್ರಾ ಆಗಿತ್ತು. ಆದ್ದರಿಂದ ಫಲಿತಾಂಶ ನಿರ್ಧರಿ ಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗ ಲಾಗಿತ್ತು. ಮೆಸ್ಸಿಗೆ ಮೊದಲ ಅವಕಾಶ ವಿತ್ತಾದರೂ ಅವರು ಚೆಂಡನ್ನು ಗುರಿ ಸೇರಿಸಲು ವಿಫಲರಾದರು.

ಮೌನ: ಚಿಲಿ ವಿರುದ್ಧದ ಪಂದ್ಯದಲ್ಲಿ ಸೋಲು  ಎದುರಾಗುತ್ತಿದ್ದಂತೆ ಅರ್ಜೆಂ ಟೀನಾ ತಂಡದ ಡ್ರೆಸ್ಸಿಂಗ್ ಕೊಠಡಿಯಲ್ಲಿ ನೀರವ ಮೌನ ಆವರಿಸಿತ್ತು.
ಪಂದ್ಯದ ಕೆಲ ಸಮಯದ ಬಳಿಕ ಆಟಗಾರರು ಪರಸ್ಪರ ಎದುರಾದರೂ  ಯಾರೂ ಮಾತನಾಡದಂತ ಸ್ಥಿತಿ.  ಈ ಸನ್ನಿವೇಶವನ್ನು ಅರ್ಜೆಂಟೀನಾ ತಂಡದ ಗೋಲ್‌ಕೀಪರ್‌ ಸೆರ್ಜಿಯೊ ರೊಮೆರೊ ಮಾಧ್ಯಮಗಳ ಜೊತೆ ಹಂಚಿ ಕೊಂಡಿದ್ದಾರೆ.

‘ನಾವೆಲ್ಲರೂ ಆಘಾತಕ್ಕೆ ಒಳಗಾಗಿ ದ್ದೇವೆ. ಅದರಲ್ಲೂ ವಿಶೇಷವಾಗಿ ಮೆಸ್ಸಿ ಸಾಕಷ್ಟು ಬೇಸರದಲ್ಲಿದ್ದಾರೆ. ಅವರನ್ನು ನೋಡಲು ನನ್ನಿಂದ ಸಾಧ್ಯವಾಗಲಿಲ್ಲ. ಮೆಸ್ಸಿ ನಿವೃತ್ತಿ ನಿರ್ಧಾರ ಪ್ರಕಟಿಸುತ್ತಿ ದ್ದಂತೆಯೇ ಉಳಿದ ಕೆಲ ಆಟಗಾರರೂ ಇದೇ ನಿರ್ಧಾರ ಕೈಗೊಳ್ಳಲು ಮುಂದಾಗಿ ದ್ದರು’ ಎಂದು ಹೇಳಿದ್ದಾರೆ.

ಆದರೆ ಮೆಸ್ಸಿ ಅವರ ನಿರ್ಧಾರಕ್ಕೆ ಸಾಮಾಜಿಕ ತಾಣಗಳಲ್ಲಿ ವಿರೋಧ ವ್ಯಕ್ತವಾಗಿದೆ. ‘ನಿವೃತ್ತಿ ನಿರ್ಧಾರ ಹಿಂದಕ್ಕೆ ಪಡೆಯಬೇಕು ಎಂದು ಅರ್ಜೆಂಟೀನಾ ತಂಡದ ಆಡಳಿತ ಅವರನ್ನು ಒತ್ತಾಯಿಸ ಬೇಕು. ನಮಗೆ ಅಪ್ರತಿಮ ಆಟಗಾರ ಬೇಕು’ ಎಂದು ಸಂದೇಶಗಳನ್ನು ಹರಿಯಬಿಡುತ್ತಿದ್ದಾರೆ.

ನವದೆಹಲಿ ವರದಿ (ಪಿಟಿಐ): ಮೆಸ್ಸಿ ಅವರ ನಿರ್ಧಾರಕ್ಕೆ ಅಚ್ಚರಿ ವ್ಯಕ್ತಪಡಿಸಿ ರುವ ಭಾರತದ ಫುಟ್‌ಬಾಲ್‌ ಆಟಗಾ ರರು ‘ನಿವೃತ್ತಿ ನಿರ್ಧಾರ ಹಿಂದಕ್ಕೆ ಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ.

‘ಮೆಸ್ಸಿ ಭಾವುಕರಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. 29 ವರ್ಷ ನಿವೃತ್ತಿ ಯಾಗುವ ವಯಸ್ಸಲ್ಲ. ಡಿಯಾಗೊ ಮರ ಡೋನಾ ಅವರೂ ಮೆಸ್ಸಿಗೆ ನಿವೃತ್ತಿ  ವಾಪಾಸ್‌ ಪಡೆಯುವಂತೆ ತಿಳಿಸಿದ್ದಾರೆ.  ಆದ್ದರಿಂದ ಇದನ್ನು ಹಿಂದಕ್ಕೆ ಪಡೆಯ ಬೇಕು’ ಎಂದು ಭಾರತ ಫುಟ್‌ಬಾಲ್ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯಾ ಹೇಳಿದ್ದಾರೆ.

ಮೆಸ್ಸಿ ಪರಿಚಯ
ಪೂರ್ಣ ಹೆಸರು: ಲಿಯೊನಲ್‌ ಆ್ಯಂಡ್ರಸ್‌ ಮೆಸ್ಸಿ

ಜನ್ಮ ದಿನ: 24ನೇ ಜೂನ್‌ 1987
ಜನ್ಮ ಸ್ಥಳ: ರೊಸಾರಿಯೊ, ಅರ್ಜೆಂಟೀನಾ
ಎತ್ತರ: ಐದು ಅಡಿ ಏಳು ಇಂಚು
ಪೋಸಿಷನ್‌: ಫಾರ್ವರ್ಡ್‌ ಆಟಗಾರ
ಪ್ರತಿನಿಧಿಸುವ ಕ್ಲಬ್‌: ಬಾರ್ಸಿಲೊನಾ
ಜರ್ಸಿ ಸಂಖ್ಯೆ: 10


ಮೆಸ್ಸಿ ಸಾಧನೆಗೆ ಲಭಿಸಿದ ಪ್ರಮುಖ ಗೌರವಗಳು
* 2005ರಲ್ಲಿ ಫಿಫಾ ವಿಶ್ವ ಯೂತ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ

* ಇವರಿದ್ದ ಅರ್ಜೆಂಟೀನಾ ತಂಡ 2007, 2015 ಮತ್ತು 2016ರಲ್ಲಿ  ಕೊಪಾ ಅಮೆರಿಕ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಅಗಿತ್ತು.
* 2008ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ತಂಡದ ಸದಸ್ಯ
* 2009ರಲ್ಲಿ ಫಿಫಾ ವಿಶ್ವದ ಆಟಗಾರ ಪ್ರಶಸ್ತಿ
* 2010, 2011, 2012 ಮತ್ತು 2015ರಲ್ಲಿ ಫಿಫಾ ಬಲೂನ್‌ ಡಿ ಓರ್ ಪ್ರಶಸ್ತಿ
* 2014ರ ಫಿಫಾ ವಿಶ್ವಕಪ್‌ನಲ್ಲಿ ರನ್ನರ್ಸ್‌ ಅಪ್‌ ಸ್ಥಾನ ಪಡೆದ ತಂಡದಲ್ಲಿದ್ದ ಆಟಗಾರ
* 2010, 2012, 2013ರಲ್ಲಿ ಯೂರೋಪಿಯನ್‌ ಲೀಗ್‌ನಲ್ಲಿ ಚಿನ್ನದ  ಬೂಟು ಲಭಿಸಿದೆ.
* 2009, 2010, 2011, 2012, 2013, 2015ರಲ್ಲಿ ಲಾ ಲೀಗಾ ಟೂರ್ನಿಯ ಶ್ರೇಷ್ಠ ಆಟಗಾರ
* 2009, 2010, 2011, 2012, 2013, 2015ರಲ್ಲಿ ಲಾ ಲೀಗಾ ಟೂರ್ನಿಯ ಅತ್ಯುತ್ತಮ ಫಾರ್ವರ್ಡ್‌ ಆಟಗಾರ
* 2005, 2007, 2008, 2009, 2010, 2011, 2012, 2013, 2015ರಲ್ಲಿ ಅರ್ಜೆಂಟೀನಾದ ವರ್ಷದ ಶ್ರೇಷ್ಠ ಆಟಗಾರ
* 2009 ಹಾಗೂ 2011ರಲ್ಲಿ ಫಿಫಾ ಕ್ಲಬ್‌ ವಿಶ್ವಕಪ್‌ ಚಿನ್ನದ ಚೆಂಡು ಪ್ರಶಸ್ತಿ
* 2014ರ ಫಿಫಾ ವಿಶ್ವಕಪ್‌ನಲ್ಲಿ ಚಿನ್ನದ ಚೆಂಡು ಗೌರವ
* 2005ರಲ್ಲಿ ಫಿಫಾ  ವಿಶ್ವ ಯೂತ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಚೆಂಡು

ಮೆಸ್ಸಿ ಹೆಸರಿನಲ್ಲಿರುವ ಪ್ರಮುಖ ದಾಖಲೆಗಳು
* ಫಿಫಾ ಬಲೂನ್ಸ್‌ ಡಿ ಒರಾ ಪ್ರಶಸ್ತಿ ಹೆಚ್ಚು ಬಾರಿ ಗೆದ್ದ ಆಟಗಾರ

* ಯುಇಎಫ್‌ಎ ಟೂರ್ನಿಯಲ್ಲಿ ಹೆಚ್ಚು ಬಾರಿ ಶ್ರೇಷ್ಠ ಆಟಗಾರ ಪಡೆದ ಗೌರವ
* ಲಾ ಲೀಗಾ ಟೂರ್ನಿಯಲ್ಲಿ ಹೆಚ್ಚು ಸಲ ಉತ್ತಮ ಆಟಗಾರ ಪ್ರಶಸ್ತಿ. ಇದೇ ಟೂರ್ನಿಯಲ್ಲಿ ಒಟ್ಟು ಹೆಚ್ಚು (312) ಗೋಲುಗಳನ್ನು ಗಳಿಸಿದ ಆಟಗಾರ
* ಲಾ ಲೀಗಾ ಟೂರ್ನಿಯ ಋತುವಿನಲ್ಲಿ ಎಂಟು ಸಲ ಹ್ಯಾಟ್ರಿಕ್‌ ಗೋಲು ಬಾರಿಸಿದ ಸಾಧನೆ
* 2008ರಿಂದ 2015ರ ಅವಧಿಯಲ್ಲಿ ಯುಎಎಫ್‌ಎ ಚಾಂಪಿಯನ್ಸ್‌ ಲೀಗ್‌ನಲ್ಲಿ ಹೆಚ್ಚು ಗೋಲು ಗಳಿಸಿದ ದಾಖಲೆ
* ಯುಎಎಫ್‌ಎ  ಟೂರ್ನಿಯಲ್ಲಿ ಹೆಚ್ಚು (ಐದು ಸಲ) ಬಾರಿ ಗೋಲು ಗಳಿಸಿದ ಏಕೈಕ ಆಟಗಾರ
* ಫಿಫಾ ವಿಶ್ವಕಪ್‌ನಲ್ಲಿ ಕಡಿಮೆ ವಯಸ್ಸಿನಲ್ಲಿ ಅರ್ಜೆಂಟೀನಾ ತಂಡದಲ್ಲಿ ಆಡಿದ ಆಟಗಾರ ಎನ್ನುವ ದಾಖಲೆ. ಮೆಸ್ಸಿ ಚೊಚ್ಚಲ ವಿಶ್ವಕಪ್‌ ಆಡಿದ್ದಾಗ ಅವರಿಗೆ 18 ವರ್ಷ 357 ದಿನವಾಗಿತ್ತು.
* ಚೊಚ್ಚಲ ಪಂದ್ಯದಲ್ಲಿಯೇ ಗೋಲು ಗಳಿಸಿದ ಹೆಗ್ಗಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT