ಬೆಂಗಳೂರು: ಜೂನ್ 14 ರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಅಫ್ಗಾನಿಸ್ತಾನ ನಡುವಣ ಟೆಸ್ಟ್ ಪಂದ್ಯ ನಡೆಯಲಿದೆ. ಇದಕ್ಕೂ ಮೊದಲು ಭಾರತದ ಕ್ರಿಕೆಟಿಗರು ಜೂನ್ 8 ರಂದು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್ಸಿಎ)ಯಲ್ಲಿ ಯೋ-ಯೋ ಟೆಸ್ಟ್ನಲ್ಲಿ ಉತ್ತೀರ್ಣಗೊಳ್ಳಬೇಕಿದೆ!
‘ಅಫ್ಗಾನ್ ಟೆಸ್ಟ್ ಬಳಿಕ, ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಹೀಗಾಗಿ ಯೋ-ಯೋ ಟೆಸ್ಟ್ ಅವಶ್ಯಕ. ಇಂಗ್ಲೆಂಡ್ ಹಾಗೂ ವೆಸ್ಟ್ಇಂಡೀಸ್ ಎ ತಂಡದ ವಿರುದ್ಧದ ತ್ರಿಕೋನ ಸರಣಿಗೆ ಆಯ್ಕೆಯಾಗಿರುವ ಭಾರತ ಎ ತಂಡದ ಆಟಗಾರರೂ ಪರೀಕ್ಷೆಗೊಳಪಡಬೇಕು’ ಎಂದು ಬಿಸಿಸಿಐ ಸೂಚಿಸಿದೆ.