ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಮಳೆಗೆ ಆಹುತಿಯಾದ ಮೊದಲ ಪಂದ್ಯ

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಚೆಸ್ಟರ್ ಲೀ ಸ್ಟ್ರೀಟ್: ಟೆಸ್ಟ್ ಸರಣಿ ಹಾಗೂ ಟ್ವೆಂಟಿ-20 ಪಂದ್ಯದ ಸೋಲಿನ ಬಳಿಕ ಗೆಲುವಿನ ಆಸೆಯಲ್ಲಿದ್ದ ಭಾರತದ ಆಟಗಾರರ ಉತ್ಸಾಹಕ್ಕೆ ಮಳೆರಾಯ ಅಡ್ಡಿಯಾದ. ಹಾಗಾಗಿ ಎಂ.ಎಸ್.ದೋನಿ ಪಡೆಗೆ ಇಲ್ಲೂ ಅದೃಷ್ಟ ಕೈಕೊಟ್ಟಿತು.

ರಿವರ್ ಸೈಡ್ ಕ್ರೀಡಾಂಗಣದಲ್ಲಿ ಶನಿವಾರ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯ ಪೂರ್ಣವಾಗಿ ನಡೆಯಲು ಮಳೆ ಅವಕಾಶ ನೀಡಲಿಲ್ಲ. ಹೀಗಾಗಿ ಪಂದ್ಯವನ್ನು ರದ್ದು ಮಾಡಲಾಯಿತು.

ಮೊದಲು ಬ್ಯಾಟ್ ಮಾಡಿದ್ದ ಭಾರತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 274 ರನ್‌ಗಳ ಸವಾಲಿನ ಮೊತ್ತವನ್ನೇ ಪೇರಿಸಿತ್ತು. ಇದಕ್ಕೆ ಉತ್ತರವಾಗಿ ಆತಿಥೇಯ ಇಂಗ್ಲೆಂಡ್ 7.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಕೇವಲ 27 ರನ್ ಗಳಿಸಿ ಸೋಲಿನ ಸುಳಿಗೆ ಸಿಲುಕಿತ್ತು.

ಈ ಸಂದರ್ಭದಲ್ಲಿ ಸುರಿದ ಮಳೆ ಇಂಗ್ಲೆಂಡ್ ಪಾಲಿಗೆ ವರದಾನವಾಗಿ ಪರಿಣಮಿಸಿತು. ಒಮ್ಮೆ ಮಳೆ ನಿಂತ ಕಾರಣ ಅಲಸ್ಟರ್ ಕುಕ್ ಪಡೆಗೆ ಪರಿಷ್ಕೃತ ಗುರಿ ನೀಡಲಾಗಿತ್ತು. 32 ಓವರ್‌ಗಳಲ್ಲಿ 224 ರನ್ ಗಳಿಸುವ ಗುರಿ ನಿಗದಿ ಮಾಡಲಾಗಿತ್ತು. ಆದರೆ ಮತ್ತೆ ಮಳೆ ಬಂದ ಕಾರಣ ಪಂದ್ಯ ರದ್ದು ಮಾಡಲಾಯಿತು.

ಹಾಗಾಗಿ ಪಾರ್ಥಿವ್ ಪಟೇಲ್ (95; 107 ಎಸೆತ, 12 ಬೌಂಡರಿ), ವಿರಾಟ್ ಕೊಹ್ಲಿ (55; 73 ಎಸೆತ, 4 ಬೌಂ,) ಹಾಗೂ ವೇಗಿ ಪ್ರವೀಣ್ ಕುಮಾರ್ (11ಕ್ಕೆ2) ಅವರ ಪ್ರಯತ್ನ ವ್ಯರ್ಥವಾಯಿತು. ಟಾಸ್ ಗೆದ್ದ ಇಂಗ್ಲೆಂಡ್ ದೋನಿ ಪಡೆಯನ್ನು ಮೊದಲು ಬ್ಯಾಟ್ ಮಾಡಲು ಆಹ್ವಾನಿಸಿತ್ತು. ಪದಾರ್ಪಣೆ ಮಾಡಿದ ಅಜಿಂಕ್ಯ ರಹಾನೆ (40; 44 ಎಸೆತ, 6 ಬೌಂ.) ಜೊತೆಗ ಪಾರ್ಥಿವ್ ಅತ್ಯುತ್ತಮ ಇನಿಂಗ್ಸ್ ಕಟ್ಟಿದರು. 

ರೋಹಿತ್‌ಗೆ ಗಾಯ: ರೋಹಿತ್ ಶರ್ಮ ಕೂಡ ಗಾಯಾಳುಗಳ ಪಟ್ಟಿಗೆ ಸೇರಿದ್ದಾರೆ. ಈ ಪಂದ್ಯದಲ್ಲಿ ಅವರು ಬ್ಯಾಟಿಂಗ್ ವೇಳೆ ಬಲಗೈ ತೋರು ಬೆರಳಿಗೆ ಗಾಯಮಾಡಿಕೊಂಡಿದ್ದಾರೆ. ಹಾಗಾಗಿ ಅವರು ಈ ಸರಣಿಯ ಉಳಿದ ಪಂದ್ಯಗಳಿಗೆ ಲಭ್ಯರಾಗುವುದು ಅನುಮಾನ. ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ ರೋಹಿತ್ ಈ ಎಡವಟ್ಟು ಮಾಡಿಕೊಂಡರು.

ಸ್ಕೋರ್ ವಿವರ
ಭಾರತ: 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 274
ಪಾರ್ಥಿವ್ ಪಟೇಲ್ ಸಿ ಕ್ರೇಗ್ ಕೀಸ್‌ವೆಟರ್ ಬಿ ಜೇಮ್ಸ ಆ್ಯಂಡರ್ಸನ್  95
ಆಜಿಂಕ್ಯ ರಹಾನೆ ಸಿ ಸಮಿತ್ ಪಟೇಲ್ ಬಿ ಸ್ಟುವರ್ಟ್ ಬ್ರಾಡ್  40
ರಾಹುಲ್ ದ್ರಾವಿಡ್ ಸಿ ಕ್ರೇಗ್ ಕೀಸ್‌ವೆಟರ್ ಬಿ ಸ್ಟುವರ್ಟ್ ಬ್ರಾಡ್  02
ವಿರಾಟ್ ಕೊಹ್ಲಿ ಬಿ ಸಮಿತ್ ಪಟೇಲ್  55
ರೋಹಿತ್ ಶರ್ಮ ಗಾಯಗೊಂಡು ನಿವೃತ್ತಿ  00
ಸುರೇಶ್ ರೈನಾ ಸಿ ಅಲಸ್ಟರ್ ಕುಕ್ ಬಿ ಡರ್ನ್‌ಬಾಕ್  38
ಎಂ.ಎಸ್.ದೋನಿ ಸಿ ಕ್ರೇಗ್ ಕೀಸ್‌ವೆಟರ್ ಬಿ ಟಿಮ್ ಬೆಸ್ನನ್  33
ಪ್ರವೀಣ್ ಕುಮಾರ್ ಔಟಾಗದೆ  02
ಆರ್.ಅಶ್ವಿನ್ ಬಿ ಟಿಮ್ ಬ್ರೆಸ್ನನ್  00
ಆರ್.ವಿನಯ್ ಕುಮಾರ್ ಔಟಾಗದೆ  01
ಇತರೆ (ಲೆಗ್‌ಬೈ-5, ವೈಡ್-3)  08

ವಿಕೆಟ್ ಪತನ: 1-82 (ರಹಾನೆ; 15.6); 2-87 (ದ್ರಾವಿಡ್; 17.4); 3-190 (ಪಾರ್ಥಿವ್; 36.6); 3-191* (ರೋಹಿತ್, ಗಾಯಗೊಂಡು ನಿವೃತ್ತಿ; 37.2); 4-206 (ಕೊಹ್ಲಿ; 39.3); 5-266 (ರೈನಾ; 48.3); 6-272 (ದೋನಿ; 49.3); 7-272 (ಅಶ್ವಿನಿ; 49.4).
ಬೌಲಿಂಗ್: ಜೇಮ್ಸ ಆ್ಯಂಡರ್ಸನ್ 9-0-41-1, ಟಿಮ್ ಬ್ರೆಸ್ನನ್ 10-0-54-2 (ವೈಡ್-2), ಸ್ಟುವರ್ಟ್ ಬ್ರಾಡ್ 10-0-56-2, ಜೇಡ್ ಡರ್ನ್‌ಬಾಕ್ 9-0-62-1, ಸಮಿತ್ ಪಟೇಲ್ 10-0-42-1, ಜೊನಾಥನ್ ಟ್ರಾಟ್ 2-0-14-0 (ವೈಡ್-1)
ಇಂಗ್ಲೆಂಡ್: 7.2 ಓವರ್‌ಗಳಲ್ಲಿ 2 ವಿಕೆಟ್‌ಗೆ 27
ಅಲಸ್ಟರ್ ಕುಕ್ ಬಿ ಪ್ರವೀಣ್ ಕುಮಾರ್  04
ಕ್ರೇಗ್ ಕೀಸ್‌ವೆಟರ್ ಎಲ್‌ಬಿಡಬ್ಲ್ಯು ಬಿ ಪ್ರವೀಣ್ ಕುಮಾರ್  06
ಜೊನಾಥನ್ ಟ್ರಾಟ್ ಬ್ಯಾಟಿಂಗ್  14
ಇಯಾನ್ ಬೆಲ್ ಬ್ಯಾಟಿಂಗ್  02
ಇತರೆ (ಲೆಗ್ ಬೈ-1)  01
ವಿಕೆಟ್ ಪತನ: 1-6 (ಕುಕ್; 2.4); 2-21 (ಕೀಸ್‌ವೆಟರ್; 6.5).
ಬೌಲಿಂಗ್: ಪ್ರವೀಣ್ ಕುಮಾರ್ 4-1-11-2, ಆರ್.ವಿನಯ್ ಕುಮಾರ್ 3.2-1-15-0
ಫಲಿತಾಂಶ: ಮಳೆಯ ಕಾರಣ ಪಂದ್ಯ ರದ್ದು. ಎರಡನೇ ಪಂದ್ಯ: ಸೌಥ್ಯಾಂಪ್ಟನ್ (ಸೆ.6).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT