ವಿಜಯಪುರ: ಕೆನ್ಯಾದ ಡೇನಿಯಲ್ ಮತ್ತು ಇಥಿಯೋಪಿಯಾದ ಜಿನಾಸವರ್ಕ್ ಭಾನುವಾರ ಇಲ್ಲಿ ನಡೆದ ಗೋಳಗುಮ್ಮಟ ಹಾಫ್ ಮ್ಯಾರಥಾನ್ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದರು. ರಾಷ್ಟ್ರಮಟ್ಟದ ಹಾಫ್ ಮ್ಯಾರಥಾನ್ನಲ್ಲಿ ಬೆಳಗಾವಿಯ ಎಂ. ಬೋರಪ್ಪ ಮತ್ತು ಸಂಗೀತಾ ನಾಯಕ ಪ್ರಶಸ್ತಿ ಗೆದ್ದರು.
‘ಬರದ ನಾಡಲ್ಲಿ ಅರಣ್ಯೀಕರಣ’ ಎಂಬ ಆಶಯದೊಂದಿಗೆ, ಇಲ್ಲಿನ ವೃಕ್ಷ ಅಭಿಯಾನ ಟ್ರಸ್ಟ್ ಮತ್ತು ವಿವಿಧ ಸಂಘಟನೆಗಳು ‘ಗೋಳಗುಮ್ಮಟ ಮ್ಯಾರಥಾನ್’ ಆಯೋಜಿಸಿದ್ದವು.
ಫಲಿತಾಂಶ:ಹಾಫ್ ಮ್ಯಾರಥಾನ್ : (ಅಂತರರಾಷ್ಟ್ರೀಯ: 21.1 ಕಿ.ಮೀ); ಪುರುಷರು: ಡೇನಿಯಲ್ (ಕೀನ್ಯಾ: ಕಾಲ: 1ಗಂಟೆ, 06ನಿ, 13ಸೆ)–1, ಪೀಟರ್ ಮಾವಾಂಗಿ –2, ಮೈಕಲ್ ಬಿವಟ್ –3