ಇಲಿಕ್ಲಿ, ಬ್ರಿಟನ್: ಅಗ್ರ ಶ್ರೇಯಾಂಕದ ಭಾರತದ ಲಿಯಾಂಡರ್ ಪೇಸ್ ಹಾಗೂ ಕೆನಡಾದ ಆದಿಲ್ ಶಮಸ್ಡಿನ್ ಜೋಡಿ ಇಲ್ಲಿ ನಡೆಯುತ್ತಿರುವ ಏಗನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಬುಧವಾರ ಕ್ವಾರ್ಟರ್ಫೈನಲ್ ಪ್ರವೇಶಿಸಿದೆ.
ಭಾರತ ಮತ್ತು ಕೆನಡಾ ಜೋಡಿ ಪುರುಷರ ಡಬಲ್ಸ್ ವಿಭಾಗದ ಪ್ರೀ ಕ್ವಾರ್ಟರ್ಫೈನಲ್ನಲ್ಲಿ 4–6, 6–3, 12–10ರಲ್ಲಿ ಆಸ್ಟ್ರೇಲಿಯಾದ ಮ್ಯಾಡ್ ರಿಡ್ ಮತ್ತು ಜಾನ್ ಪ್ಯಾಟ್ರಿಕ್ ಸ್ಮಿತ್ ಅವರನ್ನು ಮಣಿಸಿತು.
ಮುಂದಿನ ಪಂದ್ಯದಲ್ಲಿ ಪೇಸ್ ಜೋಡಿ ಬೆಲಾರಸ್ನ ಆಂಡ್ರಿ ವಸಿಲ್ವಸ್ಕಿ ಮತ್ತು ಚಿಲಿಯ ಹನ್ಸ್ ಕ್ಯಾಸ್ಟಿಲೊ ಅವರೊಂದಿಗೆ ಆಡಲಿದೆ.
ಎರಡನೇ ಶ್ರೇಯಾಂಕದ ಭಾರತದ ಇನ್ನೊಂದು ಜೋಡಿ ಪೂರವ್ ರಾಜಾ ಮತ್ತು ದಿವಿಜ್ ಶರಣ್ 6–2, 6–4ರಲ್ಲಿ ವಿಕ್ಟರ್ ಎಸ್ಟ್ರೆಲಾಮತ್ತು ಡೆರಿಯನ್ ಕಿಂಗ್ ವಿರುದ್ಧ ಗೆಲುವು ದಾಖಲಿಸಿತು.
ದಿವಿಜ್ ಮತ್ತು ಪೂರವ್ ಕ್ವಾರ್ಟರ್ನಲ್ಲಿ ಥಾಯ್ಲೆಂಡ್ನ ಸಂಚೈ ಮತ್ತು ಸಂಚತ್ ಎದುರು ಆಡಲಿದ್ದಾರೆ.
ಲಂಡನ್ನಲ್ಲಿ ನಡೆದ ಏಗನ್ ಚಾಂಪಿಯನ್ಷಿಪ್ನ ಮೊದಲ ಸುತ್ತಿನ ಪಂದ್ಯದಲ್ಲಿ ರೋಹನ್ ಬೋಪಣ್ಣ ಹಾಗೂ ಇವಾನ್ ದೊಡಿಗ್ ಜೋಡಿ 6–3, 6–7, 10–7ರಲ್ಲಿ ಕೆಲೆ ಎಡ್ಮಂಡ್ ಮತ್ತು ತಾನಸಿ ಕೊಕೊನಕಿನ್ಸ್ ವಿರುದ್ಧ ಗೆಲುವು ಪಡೆಯಿತು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.