ಮ್ಯಾಡ್ರಿಡ್ (ಎಎಫ್ಪಿ): ಜ್ವರ ದಿಂದ ಬಳಲುತ್ತಿರುವ ವಿಶ್ವದ ಅಗ್ರಮಾನ್ಯ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಮುಂಬರುವ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಗೆ ಅಲಭ್ಯರಾಗಿದ್ದಾರೆ. ಸೆರೆನಾ ಅವರು ಟೂರ್ನಿಯಿಂದ ಹಿಂದೆ ಸರಿದಿರುವ ವಿಷಯವನ್ನು ಶುಕ್ರವಾರ ಖಚಿತಪಡಿಸಿದ್ದಾರೆ.
ಸೆರೆನಾ ಅನುಪಸ್ಥಿತಿಯಲ್ಲಿ ಪೋಲೆಂಡ್ನ ಅಗ್ನಿಸ್ಕಾ ರಾಡ್ವಾಂಸ್ಕಾ ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಗಳಿಸಿದ್ದಾರೆ. ಅಮೆರಿಕದ ಆಟಗಾರ್ತಿ ಹಿಂದೆ ಸರಿದಿರುವ ಕಾರಣ ರಾಡ್ವಾಂಸ್ಕಾ, ಏಂಜಲಿಕ್ ಕೆರ್ಬರ್, ಪೆಟ್ರಾ ಕ್ವಿಟೋವಾ, ವಿಕ್ಟೋರಿಯಾ ಅಜರೆಂಕಾ ಮತ್ತು ಗಾರ್ಬೈನ್ ಮುಗುರುಜಾ ಅವರ ನಡುವೆ ಪ್ರಶಸ್ತಿಗಾಗಿ ಸ್ಪರ್ಧೆ ಏರ್ಪಟ್ಟಿದೆ.