ಹನೊಯಿ: ಜೂನ್ 14 ರಿಂದ ರಷ್ಯಾದಲ್ಲಿ ಆರಂಭವಾಗುವ ಫಿಫಾ ವಿಶ್ವಕಪ್ ಫೂಟ್ಬಾಲ್ ಟೂರ್ನಿಯು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಫುಟ್ಬಾಲ್ ತಂಡಗಳ ಬಾವುಟಗಳು, ಪ್ರಮುಖ ಆಟಗಾರರ ಚಿತ್ರವಿರುವ ಟಿ–ಶರ್ಟ್ಗಳು, ಬಣ್ಣ–ಬಣ್ಣದ ಕಾಲ್ಚೆಂಡುಗಳ ಮಾರಾಟಗಾರರಿಗೆ ಈಗ ಸುಗ್ಗಿಕಾಲ.
ಇದೇ ವೇಳೆ ವಿಶ್ವಕಪ್ ಟ್ರೋಫಿಯ ಪ್ರತಿಕೃತಿಗಳಿಗೂ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ.
ದಕ್ಷಿಣ ಆಫ್ರಿಕಾದಲ್ಲಿ ನಡೆದ 2010ರ ವಿಶ್ವಕಪ್ನ ಸಮಯದಿಂದಲೂ ಟ್ರೋಫಿಯ ಪ್ರತಿಕೃತಿಗಳನ್ನು ತಯಾರಿಸುತ್ತಿರುವ ಇಲ್ಲಿನ ಕುಶಲಕರ್ಮಿ ವೊಂಗ್ ಹೊಂಗ್ ಹಾಟ್ ಅವರಿಗೆ ಈಗ ಕೈತುಂಬ ಕೆಲಸ. ದೇಶ–ವಿದೇಶಗಳ ಫುಟ್ಬಾಲ್ ಅಭಿಮಾನಿಗಳು ಇವರು ತಯಾರಿಸುವ ಪ್ರತಿಕೃತಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆಸಕ್ತಿ ತೋರಿಸುತ್ತಿದ್ಧಾರೆ.