ಮಿಯಾಮಿ: ಸ್ಪೇನ್ನ ಆಟಗಾರ ರಫೆಲ್ ನಡಾಲ್ ಅವರು ಭಾನುವಾರ ವೃತ್ತಿ ಬದುಕಿನ 1000ನೇ ಟೆನಿಸ್ ಪಂದ್ಯವನ್ನು ಆಡಿದ ಸಾಧನೆಗೆ ಭಾಜನರಾದರು.
ಇಲ್ಲಿ ನಡೆಯುತ್ತಿರುವ ಮಿಯಾಮಿ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಅವರು ಜರ್ಮನಿಯ ಫಿಲಿಪ್ ಕೊಹ್ಲ್ಶ್ರಿಬರ್ ಅವರನ್ನು ಮಣಿಸಿ ಈ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು.
ಭಾನುವಾರ ನಡೆದ ಪಂದ್ಯದಲ್ಲಿ ನಡಾಲ್ 0–6, 6–2, 6–3ರಲ್ಲಿ ಫಿಲಿಪ್ ಸವಾಲು ಮೀರಿನಿಂತು ನಾಲ್ಕನೇ ಸುತ್ತಿಗೆ ಲಗ್ಗೆ ಇಟ್ಟರು.
ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ‘ರಫಾ’ ಎಟಿಪಿ ಟೂರ್ ನಲ್ಲಿ ಗೆದ್ದ 822ನೇ ಪಂದ್ಯ ಇದಾಗಿದೆ.
ಮೊದಲ ಸೆಟ್ನಲ್ಲಿ ನಡಾಲ್ ಅವರಿಂದ ನಿರೀಕ್ಷಿತ ಆಟ ಮೂಡಿ ಬರಲಿಲ್ಲ. ಶರವೇಗದ ಸರ್ವ್ಗಳನ್ನು ಮಾಡಿದ ಫಿಲಿಪ್ ತಮ್ಮ ಸರ್ವ್ ಕಾಪಾಡಿಕೊಳ್ಳುವ ಜೊತೆಗೆ ಮೂರು ಬಾರಿ ನಡಾಲ್ ಸರ್ವ್ ಮುರಿದು ಏಕಪಕ್ಷೀಯವಾಗಿ ಸೆಟ್ ಗೆದ್ದರು.
ಇದರಿಂದ ಸ್ಪೇನ್ನ ಆಟಗಾರ ಎದೆಗುಂದಲಿಲ್ಲ. ಎರಡು ಮತ್ತು ಮೂರನೇ ಸೆಟ್ಗಳಲ್ಲಿ ಆಕರ್ಷಕ ಆಟ ಆಡಿದ ಅವರು ಗೆಲುವು ಒಲಿಸಿಕೊಂಡರು.