ನವದೆಹಲಿ (ಪಿಟಿಐ): ಬಾಲಾದೇವಿ ಗಳಿಸಿದ ನಾಲ್ಕು ಗೋಲುಗಳ ಬಲದಿಂದ ಭಾರತ ಮಹಿಳಾ ತಂಡ ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ನಡೆದ ಮೂರನೇ ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಷನ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಶುಕ್ರವಾರ ನಡೆದ ಫೈನಲ್ ಹೋರಾಟದಲ್ಲಿ ಭಾರತ 6–0 ಗೋಲುಗಳಿಂದ ನೇಪಾಳ ತಂಡದ ಎದುರು ಜಯಭೇರಿ ಮೊಳಗಿಸಿತು. ಈ ಮೂಲಕ ಮೂರನೇ ಬಾರಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿತು.
ಮಹತ್ವದ ಪಂದ್ಯದಲ್ಲಿ ದಿಟ್ಟ ಹೋರಾಟ ತೋರಿದ ಭಾರತಕ್ಕೆ 25ನೇ ನಿಮಿಷದಲ್ಲಿ ಕಮಲಾ ದೇವಿ ಮುನ್ನಡೆ ಒದಗಿಸಿದರು.
39ಮತ್ತು 40ನೇ ನಿಮಿಷಗಳಲ್ಲಿ ಸತತ ಎರಡು ಬಾರಿ ಚೆಂಡನ್ನು ಗುರಿ ಸೇರಿಸಿದ ಬಾಲಾ ದೇವಿ ಮುನ್ನಡೆಯನ್ನು 3–0ಗೆ ಏರಿಕೆ ಮಾಡಿದರು.
47ನೇ ನಿಮಿಷದಲ್ಲಿ ಪರಮೇಶ್ವರಿ ದೇವಿ ಗೋಲು ಗಳಿಸಿದರೆ, ಸೊಗಸಾದ ಪ್ರದರ್ಶನ ಮುಂದುವರಿಸಿದ ಬಾಲಾದೇವಿ 51 ಮತ್ತು 90+2ನೇ ನಿಮಿಷದಲ್ಲಿ ಗೋಲು ದಾಖಲಿಸಿ ಭಾರತದ ಪಾಳಯದಲ್ಲಿ ಸಂಭ್ರಮ ಮೂಡಿಸಿದರು.