ಢಾಕಾ (ಐಎಎನ್ಎಸ್): ಡೆಂಗಿಯಿಂದ ಆನಾರೋಗ್ಯಕ್ಕೆ ಒಳಗಾಗಿರುವ ಕಾರಣ ಬಾಂಗ್ಲಾದೇಶ ಏಕದಿನ ಕ್ರಿಕೆಟ್ ತಂಡದ ನಾಯಕ ಮಶ್ರಫಾ ಮುರ್ತಜಾ ಅವರನ್ನು ಇಲ್ಲಿನ ಅಪೊಲೊ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
‘ಮಶ್ರಫೆಗೆ ಡೆಂಗಿ ಜ್ವರ ಬಂದಿರುವುದುನ್ನು ವೈದ್ಯರು ಖಚಿತಪಡಿಸಿದ್ದಾರೆ. ಅವರಿಗೆ ಜ್ವರವಿದೆ ಎಂದು ವೈದ್ಯರು ಹೇಳಿದ್ದಾರೆ’ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿ ಫಿಸಿಯೊ ದೇಬಶಿಶ್ ಚೌಧರಿ ತಿಳಿಸಿದ್ದಾರೆ. ಮಶ್ರಫೆ 36 ಟೆಸ್ಟ್ ಮತ್ತು 57 ಏಕದಿನ ಪಂದ್ಯಗಳನ್ನು ಆಡಿದ್ದಾರೆ.