ನವದೆಹಲಿ: ಭಾರತದ ಜಿತು ರಾಯ್ ಹಾಗೂ ಹೀನಾ ಸಿಧು ಜಪಾನ್‌ನ ವಾಕೊ ಸಿಟಿಯಲ್ಲಿ ನಡೆಯುತ್ತಿರುವ 10ನೇ ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಪುರುಷರ 10ಮೀ ಏರ್ ಪಿಸ್ತೂಲ್ ವಿಭಾಗದಲ್ಲಿ ಜಿತು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಮಹಿಳೆಯರ 10ಮೀ ಏರ್ ಪಿಸ್ತೂಲ್ ವಿಭಾಗದಲ್ಲಿ ಹೀನಾ ಕಂಚಿಗೆ ಕೊರಳೊಡ್ಡಿದ್ದಾರೆ.

10ಮೀ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಪುರುಷರ ತಂಡ ಚಿನ್ನ ಗೆದ್ದುಕೊಂಡಿದೆ. ಜಿತು, ಶಹಜಾರ್ ರಿಜ್ವಿ, ಓಂಕಾರ್ ಸಿಂಗ್ ತಂಡದಲ್ಲಿ ಇದ್ದಾರೆ.

ಹೀನಾ, ಶ್ರೀ ನಿವೇತಾ, ಹರ್ವೀನ್ ಸಾರೊ ಅವರನ್ನು ಒಳಗೊಂಡ ಮಹಿಳೆಯರ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

ಜೂನಿಯರ್ ಪುರುಷರ ತಂಡ 10ಮೀ ಏರ್ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಜಯಿಸಿದೆ. ತಂಡದಲ್ಲಿ ಅನ್ಮೋಲ್ ಜೈನ್, ಗೌರವ್ ರಾಣಾ, ಅಭಿಷೇಕ್ ಆರ್ಯ ಇದ್ದಾರೆ.

ಅನ್ಮೋಲ್ ಜೂನಿಯರ್ ವೈಯಕ್ತಿಕ 10ಮೀ ಏರ್ ಪಿಸ್ತೂಲ್ ವಿಭಾಗದ ಕಂಚು ಜಯಿಸಿದ್ದಾರೆ.

ಟೂರ್ನಿಯಲ್ಲಿ ಭಾರತ ಒಟ್ಟು 17 ಪದಕಗಳನ್ನು ಗೆದ್ದುಕೊಂಡಿದೆ. ನಾಲ್ಕು ಚಿನ್ನ, ಆರು ಬೆಳ್ಳಿ, ಏಳು ಕಂಚಿನ ಪದಕಗಳು ಇದರಲ್ಲಿ ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.