ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಸೌತ್ ಯುನೈಟೆಡ್ ತಂಡಕ್ಕೆ 37ನೇ ನಿಮಿಷದಲ್ಲಿ ಮುನ್ನಡೆ ಲಭಿಸಿತು. ಸುಭಾಷ್ ಆಕರ್ಷಕ ರೀತಿಯಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. 41ನೇ ನಿಮಿಷದಲ್ಲಿ ಲೋಕೇಶ್ ಗೋಲು ಬಾರಿಸಿ ಸಂಭ್ರಮ ಹೆಚ್ಚಿಸಿದರು. ಇದರ ಬೆನ್ನಲ್ಲೇ (43) ಸುಭಾಷ್ ಮೋಡಿ ಮಾಡಿದರು. ಹೀಗಾಗಿ ತಂಡ 3–0ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.