ನವದೆಹಲಿ (ಪಿಟಿಐ): ‘ಆಸ್ಟ್ರೇಲಿಯದ ಟೆರ್ರಿ ವಾಲ್ಶ್ ಅವರನ್ನು ಭಾರತ ಪುರುಷರ ಹಾಕಿ ತಂಡದ ಮುಖ್ಯ ಕೋಚ್ ಹುದ್ದೆಯಲ್ಲಿ ಮುಂದು ವರಿಸುವ ಅಗತ್ಯವಿಲ್ಲ’ ಎಂದು ಹಾಕಿ ಇಂಡಿಯಾ ಅಧ್ಯಕ್ಷ ನರೀಂದರ್ ಬಾತ್ರಾ ಹೇಳಿದ್ದಾರೆ.
‘ಹಾಕಿ ಇಂಡಿಯಾಕ್ಕೆ ವಾಲ್ಶ್ ಬೇಕಿಲ್ಲ. ಭಾರತ ಕ್ರೀಡಾ ಪ್ರಾಧಿಕಾರದ ಅನುಮತಿ ಪಡೆದು ತಂಡಕ್ಕೆ ನೂತನ ತರಬೇತುದಾರರನ್ನು ನೇಮಿಸುತ್ತೇವೆ’ ಎಂದು ಬಾತ್ರಾ ಅವರು ಭಾರತ ಕ್ರೀಡಾ ಪ್ರಾಧಿಕಾರದ ಪ್ರಧಾನ ನಿರ್ದೇಶಕ ಜಿಜಿ ಥಾಮ್ಸನ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.