ಮಂಗಳವಾರ, ಸೆಪ್ಟೆಂಬರ್ 28, 2021
21 °C

ಪ್ರವಾಸದ ವೇಳೆ ಬ್ರಿಟನ್‌ನ ವಿವಾಹಿತೆ ಸಾವು: ಪತಿ ವಶಕ್ಕೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಕೊಲಂಬೊ: ಪ್ರವಾಸದ ವೇಳೆ ಮೃತಪಟ್ಟ ಬ್ರಿಟನ್‌ನ ನವವಿವಾಹಿತೆ ಉಶೀಲಾ ಪಟೇಲ್ (31) ಅವರ ಪತಿಯನ್ನು ಶ್ರೀಲಂಕಾದಿಂದ ಹೊರಹೋಗದಂತೆ ತಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಏ.19ರಂದು ಲಂಡನ್‌ನಲ್ಲಿ ವಿವಾಹವಾಗಿದ್ದ ಉಶೀಲಾ ಪಟೇಲ್ ಹಾಗೂ ಖಿಲನ್ ಚಂದೇರಿಯಾ ಏ.23ರಂದು ಶ್ರೀಲಂಕಾದ ಗೇಲ್‌ನಲ್ಲಿರುವ ಅಮರಿ ಗೇಲ್‌ ರೆಸಾರ್ಟ್‌ಗೆ ಬಂದಿದ್ದರು. ಏ.25ರಂದು ಪಟೇಲ್ ಮೃತಪಟ್ಟಿದ್ದರು.

‘ದಂಪತಿ ವಿಷಪೂರಿತ ಆಹಾರ ಸೇವನೆಯಿಂದ ಅಸ್ವಸ್ಥರಾಗಿದ್ದರು’ ಎಂದು ಅವರ ಕುಟುಂಬದ ಮೂಲಗಳು ಬ್ರಿಟನ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದವು. ಏ.25ರಂದು ರೆಸಾರ್ಟ್‌ನಲ್ಲಿ ಆಹಾರ ಸೇವಿಸಿದ ಬಳಿಕ ದಂಪತಿ ಅಸ್ವಸ್ಥಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು