ಬಡತನ ಮೆಟ್ಟಿನಿಂತ ವಿದ್ಯಾರ್ಥಿನಿಯರು

ಬುಧವಾರ, ಮೇ 22, 2019
32 °C

ಬಡತನ ಮೆಟ್ಟಿನಿಂತ ವಿದ್ಯಾರ್ಥಿನಿಯರು

Published:
Updated:
Prajavani

ದಾಬಸ್‌ಪೇಟೆ: ಅಪ್ಪ ಡಾಬಾದಲ್ಲಿ ಸಪ್ಲೆಯರ್, ಅಮ್ಮ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿ, ಮಗಳೀಗ ಎಸ್ಸೆಸ್ಸೆಲ್ಸಿ ಯಲ್ಲಿ 606 ಅಂಕ ಪಡೆದ‌ ಸಾಧಕಿ.

8ನೇ ತರಗತಿ ತನಕ ಸರ್ಕಾರಿ ಶಾಲೆಯಲ್ಲಿ ಓದಿದ ಅಂಚೇಪಾಳ್ಯ ಗ್ರಾಮದ ಪ್ರಿಯಾಂಕಾ, 9 ಮತ್ತು 10ನೇ ತರಗತಿಯನ್ನು ಸಿದ್ದಗಂಗಾ ಸಂಸ್ಥೆಯ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ ಕಲಿತಳು.

‘ಟ್ಯೂಷನ್‌ಗೆ ಹೋಗದೆ ಶಾಲೆಯಲ್ಲಿ ಕಲಿಸಿದ್ದನ್ನು ಶ್ರದ್ಧೆಯಿಂದ ಕಲಿತೆ. ಅಂದಿನ ಪಾಠಅಂದೇ ಓದಿದ್ದರಿಂದ ಸಾಧನೆ ಸುಲಭವಾಯಿತು’ ಎಂದು ಪ್ರಿಯಾಂಕ ಹೇಳಿದರು.

ಚಿಲ್ಲರೆ ಅಂಗಡಿ ನಡೆಸುವ ಹೆತ್ತವರ ಬಡತನ ಕಂಡು ಛಲದೊಂದಿಗೆ ಕಲಿತ ವಿವೇಕಾನಂದ ಶಾಲೆಯ ಡಿ.ಎಂ. ಸಂಜನಾ, 600 ಅಂಕ ಗಳಿಸಿದ್ದಾರೆ.

ಅನನ್ಯಾ ಪ್ರಥಮ
ನೆಲಮಂಗಲ:
ಪಟ್ಟಣದ ಸದಾಶಿವನಗರದ ನಿವಾಸಿ ಉಪನ್ಯಾಸಕ ಕೆಂಪೇಗೌಡ ಅವರ ಪುತ್ರಿ, ಬಿ.ಪಿ.ಇಂಡಿಯನ್‌ ಶಾಲೆ ವಿದ್ಯಾರ್ಥಿನಿ ಕೆ.ಅನನ್ಯಾ ಎಸ್ಸೆಸ್ಸೆಲ್ಸಿಯಲ್ಲಿ 618 ಅಂಕ ಗಳಿಸುವ ಮೂಲಕ ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಎಬಿನೇಜರ್‌ ಶಾಲೆಯ ವಿ.ಎಸ್‌.ದೀಪಕ್‌ 617 ದ್ವಿತೀಯ, ಬಸವೇಶ್ವರ ಆಂಗ್ಲ ಶಾಲೆಯ ನಿಷಾದ್‌ ಬಾಬು ಸೂಲಿಕೇರಿ 616 ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !