ಉಚಿತ ನೇತ್ರ ತಪಾಸಣಾ ಶಿಬಿರ

7

ಉಚಿತ ನೇತ್ರ ತಪಾಸಣಾ ಶಿಬಿರ

Published:
Updated:
ಚಿಕ್ಕೋಡಿಯ ಖಡಕಲಾಟ ಗ್ರಾಮದಲ್ಲಿ ಡಿ.ಎಲ್. ಪಾಟೀಲ ಅವರ 19ನೇ ಸ್ಮೃತಿ ದಿನದ ನಿಮಿತ್ತ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ ಶಿಬಿರಕ್ಕೆ ಬಂಡಾ ಸರದಾರ ಚಾಲನೆ ನೀಡಿದರು

ಚಿಕ್ಕೋಡಿ: ತಾಲ್ಲೂಕಿನ ಖಡಕಲಾಟ ಗ್ರಾಮದಲ್ಲಿ ಉದ್ಯಮಿ ಡಿ.ಎಲ್. ಪಾಟೀಲ ಅವರ 19ನೇ ಸ್ಮೃತಿ ದಿನದ ನಿಮಿತ್ತ ಇತ್ತೀಚೆಗೆ ಉಚಿತ ನೇತ್ರ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಖಡಕಲಾಟ ಗ್ರಾಮದ ಡಿ.ಎಲ್. ಪಾಟೀಲ ಚಾರಿಟೇಬಲ್ ಟ್ರಸ್ಟ್‌, ಮಿರಜ್‌ನ ನ್ಯಾಬ್‌ ಕಣ್ಣು ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಮತ್ತು ಮೋತಿ ಬಿಂದು ಶಸ್ತ್ರಚಿಕಿತ್ಸೆ ಶಿಬಿರದಲ್ಲಿ 383 ಜನರು ಕಣ್ಣಿನ ತಪಾಸಣೆ ಮಾಡಿಸಿಕೊಂಡರು. 100 ಜನರನ್ನು ಮೋತಿ ಬಿಂದು ಶಸ್ತ್ರ ಕ್ರಿಯೆಗೆ ಆಯ್ಕೆ ಮಾಡಿ, ಮಿರಜ್‌ನಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಮರಳಿ ಸ್ವಗ್ರಾಮಕ್ಕೆ ತಲುಪಿಸುವ ವ್ಯವಸ್ಥೆ ಮಾಡಿಸಲಾಗಿದೆ ಎಂದು ಎ.ಎಲ್.ಪಾಟೀಲ ತಿಳಿಸಿದರು.

ಬಂಡಾ ಸರದಾರ ಶಿಬಿರಕ್ಕೆ ಚಾಲನೆ ನೀಡಿದರು. ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷ ಎ.ಎಲ್. ಪಾಟೀಲ ಇದ್ದರು.

ಡಾ.ಅಖಿಬ್ ಮುಶ್ರೀಫ್‌, ರವೀಂದ್ರ ಕದಂ, ಮದಾರ್ ಮುಲ್ಲಾ, ವಿನಯ ಯಾದವ, ವಿನಾಯಕ ಇಂಗಳೆ ಹಾಗೂ ತಂಡದವರು ನೇತ್ರ ತಪಾಸಣೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !