ಸಾಮಾಜಿಕ ಜಾಲತಾಣದಲ್ಲಿ ಪಾಕ್ ಗಾಯಕ ಟ್ರೋಲ್‌

7

ಸಾಮಾಜಿಕ ಜಾಲತಾಣದಲ್ಲಿ ಪಾಕ್ ಗಾಯಕ ಟ್ರೋಲ್‌

Published:
Updated:
Deccan Herald

ಕರಾಚಿ: ನ್ಯೂಯಾರ್ಕ್‌ನಲ್ಲಿ ನಡೆದ ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾರತದ ಹಾಡು ಹಾಡಿದ್ದಕ್ಕಾಗಿ ಪಾಕಿಸ್ತಾನಿ ಗಾಯಕ ಅತಿಫ್‌ ಅಸ್ಲಾಮ್ ಅವರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಒಳಗಾಗಿದ್ದಾರೆ. ಪಾಕಿಸ್ತಾನ ಮುಖ್ಯ ಸುದ್ದಿವಾಹಿನಿಗಳೂ ಇವರನ್ನೂ ಟೀಕಿಸಿವೆ.

ಆತಿಫ್ ಅಸ್ಲಾಮ್ ಅವರು ಪಾಕ್‌ಗೆ ಮರಳುತ್ತಿದ್ದಂತೆ ‘ನಿಮ್ಮ ದೇಶಭಕ್ತಿ ಎಲ್ಲಿ’ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.

‘ಭಾರತದ ಸಂಗೀತ, ಪಾಕಿಸ್ತಾನದ ಸಂಗೀತ ಎನ್ನುವುದಿಲ್ಲ’ ಎಂದು ಗಾಯಕ ಶಫ್ಖತ್ ಅಮನಾತ್ ಅಲಿ ಹೇಳಿದ್ದಾರೆ.

‘ಪಾಕಿಸ್ತಾನ ವಾಹಿನಿಯಲ್ಲಿ ಬಾಲಿವುಡ್ ಸಿನಿಮಾಗಳನ್ನು ಪ್ರಸಾರ ಮಾಡುತ್ತಾರೆ. ಪಾಕ್ತಿಸ್ತಾನಿಗಳು ಅವುಗಳನ್ನು ನೋಡದೆ ಸುಮ್ಮನೆ ಇರುತ್ತಾರಾ?. ಸಿನಿಮಾ, ಕಲೆ, ಸಂಗೀತಕ್ಕೆ ದೇಶ ಗಡಿಗಳ ಮಿತಿಯಿಲ್ಲ’ ಎಂದು ಸಿನಿಮಾ ವಿಮರ್ಶಕ ಒಮೇರ್‌ ಅಲಾವಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !