ಗೆಲುವಿನ ಓಟ ಮುಂದುವರಿಸುವ ಭರವಸೆಯಿಂದ ಕಣಕ್ಕೆ ಇಳಿದ ಭಾರತದ ಮಹಿಳೆಯರು ಆರಂಭದಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದರು. ದಕ್ಷಿಣ ಕೊರಿಯಾ ಪ್ರತಿಹೋರಾಟ ನಡೆಸಿದ್ದರಿಂದ ಮೊದಲ ಕ್ವಾರ್ಟರ್ ಜಿದ್ದಾಜಿದ್ದಿಗೆ ಕಾರಣವಾಯಿತು. ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದುಪಯೋಗ ಮಾಡಿಕೊಂಡ ಚಾನ್ ಮತ್ತು ಲೀ ಆತಿಥೇಯರ ಮುನ್ನಡೆಗೆ ಕಾರಣರಾದರು.