ಹೊಣೆ ಹೊತ್ತ ಐಎಸ್‌ ಉಗ್ರರು

7
ಕಾಬೂಲ್‌: ಸಿಖ್‌, ಹಿಂದೂಗಳ ಮೇಲೆ ದಾಳಿ

ಹೊಣೆ ಹೊತ್ತ ಐಎಸ್‌ ಉಗ್ರರು

Published:
Updated:

ಕಾಬೂಲ್‌: ಅಫ್ಗಾನಿಸ್ತಾನದ ಜಲಾಲಾಬಾದ್‌ನಲ್ಲಿ ಸಿಖ್‌ ಮತ್ತು ಹಿಂದೂಗಳನ್ನು ಗುರಿಯಾಸಿಕೊಂಡು ನಡೆಸಿದ ಆತ್ಮಾಹುತಿ ಬಾಂಬ್‌ ದಾಳಿಯ ಹೊಣೆಯನ್ನು ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಸಂಘಟನೆ ಹೊತ್ತಿದೆ.

ರಾಜ್ಯಪಾಲರ ನಿವಾಸದ ಕಡೆಗೆ ಹೋಗುತ್ತಿದ್ದ ಗುಂಪನ್ನು ಗುರಿಯಾಗಿಸಿ ಆತ್ಮಾಹುತಿ ಬಾಂಬ್‌ ದಾಳಿ ನಡೆದಿದೆ. ಹತ್ಯೆಯಾದ ಜನರ ಗುಂಪು ಅಧ್ಯಕ್ಷ ಅಶ್ರಫ್ ಘನಿ ಅವರನ್ನು ಭೇಟಿ ಮಾಡಲು ಹೋಗುತ್ತಿತ್ತು. ದಾಳಿಯಲ್ಲಿ ಸಿಖ್‌ ಸಮುದಾಯದ ನಾಯಕ ಅವತಾರ್‌ ಸಿಂಗ್‌ ಸೇರಿದಂತೆ ಹತ್ತೊಂಬತ್ತು ಮಂದಿ ಸಾವನ್ನಪ್ಪಿದ್ದಾರೆ. 21 ಮಂದಿ ಗಾಯಗೊಂಡಿದ್ದಾರೆ. 

‘ಬಹುದೇವತಾ ಆರಾಧಕರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದ್ದೇವೆ’ ಎಂದು ಐಎಸ್‌ ಸಂಘಟನೆ ಹೇಳಿಕೆಯಲ್ಲಿ ತಿಳಿಸಿದೆ. 

1970ರಲ್ಲಿ 80 ಸಾವಿರವಿದ್ದ ಎರಡೂ ಸಮುದಾಯದ ಒಟ್ಟು ಜನಸಂಖ್ಯೆ ಈಗ ಒಂದು ಸಾವಿರಕ್ಕೆ ಇಳಿದಿದೆ. ಹಿಂದೂಗಳು, ಸಿಖ್‌ ಸಮುದಾಯದವರ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸಿದೆ. 

‘ನಾವು ಇಲ್ಲಿ ಬದುಕಲಾರೆವು’
‘ನಾವು ಇಲ್ಲಿ ವಾಸಿಸಲು ಸಾಧ್ಯವಿಲ್ಲ’. ಇದು ಅಫ್ಗಾನಿಸ್ತಾನದಲ್ಲಿರುವ ಬಹುತೇಕ ಹಿಂದೂ ಮತ್ತು ಸಿಖ್‌ ಸಮುದಾಯದವರ ಮಾತು.  ‘ಸರ್ಕಾರ ನಮ್ಮನ್ನು ಗುರುತಿಸಿದೆ. ಆದರೆ, ನಮ್ಮ ಧಾರ್ಮಿಕ ಪದ್ಧತಿಗಳನ್ನು ಸಹಿಸಿಕೊಳ್ಳಲು ಭಯೋತ್ಪಾದಕರಿಗೆ ಸಾಧ್ಯವಾಗುತ್ತಿಲ್ಲ. ನಾವು ಮುಸ್ಲಿಂ ಅಲ್ಲದ ಕಾರಣಕ್ಕೆ ಉಗ್ರಗಾಮಿಗಳು ನಮ್ಮನ್ನು ಗುರಿಯಾಗಿಸಿಕೊಂಡಿದ್ದಾರೆ’ ಎಂದು ದಾಳಿಯಲ್ಲಿ ಮೃತಪಟ್ಟವರ ಸಂಬಂಧಿಕರು ಅಳಲು ತೋಡಿಕೊಂಡರು. 

‘ದೇಶ ತೊರೆಯಬೇಕು, ಇಲ್ಲವೇ ಇಸ್ಲಾಂ ಧರ್ಮಕ್ಕೆ ಮತಾಂತರವಾಗಬೇಕು ಅಷ್ಟೇ’ ಎಂದು ಸ್ಥಳೀಯ ನಿವಾಸಿ ಬಲದೇವ್‌ ಸಿಂಗ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !