ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಫೆಡರಲ್‌ ಸರ್ಕೀಟ್‌ ಕೋರ್ಟ್‌ನ ಸಿಜೆ ಆಗಿ ಭಾರತ ಮೂಲದ ಶ್ರೀನಿವಾಸನ್‌ ನೇಮಕ

ಅಮೆರಿಕ ಫೆಡರಲ್‌ ಸರ್ಕೀಟ್‌ ಕೋರ್ಟ್‌
Last Updated 19 ಫೆಬ್ರುವರಿ 2020, 13:54 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಸುಪ್ರೀಂ ಕೋರ್ಟ್‌ ನಂತರ ಪ್ರಬಲ ನ್ಯಾಯಾಲಯವೆಂದೇ ಪರಿಗಣಿಸಲ್ಪಟ್ಟಿರುವ ಫೆಡರಲ್‌ ಸರ್ಕೀಟ್‌ ಕೋರ್ಟ್‌ನ ಮುಖ್ಯ ನ್ಯಾಯಮುರ್ತಿಯಾಗಿ ಭಾರತ ಮೂಲದ ಶ್ರೀನಿವಾಸನ್‌ ನೇಮಕಗೊಂಡಿದ್ದಾರೆ.

ಅಮೆರಿಕದ ನ್ಯಾಯಾಲಯಗಳಲ್ಲಿ ದೊಡ್ಡ ಹುದ್ದೆ ಅಲಂಕರಿಸಿದ ಭಾರತ ಮೂಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. 52 ವರ್ಷದ ಶ್ರೀನಿವಾಸನ್‌ ಅವರು ಅಮೆರಿಕದ ಅಪೀಲುಗಳ ಡಿಸಿ ಸರ್ಕೀಟ್‌ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದಾರೆ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸ್ಥಾನಕ್ಕೆ ಈಗಾಗಲೇ ಎರಡು ಬಾರಿ ಪರಿಗಣಿಸಲ್ಪಟ್ಟಿದ್ದ ಶ್ರೀನಿವಾಸನ್‌ ಅವರು, ಇದೇ ಫೆಬ್ರುವರಿ 12 ರಂದು ಡಿಸಿ ಫೆಡರಲ್‌ ಸರ್ಕೀಟ್‌ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT