ಮಾಂಸಾಹಾರ ವರ್ಜನೆಗೆ ಮುದ್ದುಮರಿಗಳೇ ಕಾರಣ!

7

ಮಾಂಸಾಹಾರ ವರ್ಜನೆಗೆ ಮುದ್ದುಮರಿಗಳೇ ಕಾರಣ!

Published:
Updated:
Deccan Herald

ಲಂಡನ್: ಮರಿಪ್ರಾಣಿಗಳ ಚಿತ್ರಗಳನ್ನು ವೀಕ್ಷಿಸುವುದರಿಂದ ಮಾಂಸ ಸೇವನೆ ಬಗೆಗಿನ ಆಪೇಕ್ಷೆ ತಗ್ಗುತ್ತದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರ ಮೇಲೆ ಇದು ಬೀರುವ ಪರಿಣಾಮ ಹೆಚ್ಚು ಎಂದು ಲಂಕಸ್ಟರ್ ವಿಶ್ವವಿದ್ಯಾಲಯ ಹಾಗೂ ಯೂನಿವರ್ಸಿಟಿ ಕಾಲೇಜ್ ಲಂಡನ್‌ನ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. 

ಕಾಂಗರೂ ಮರಿ, ಕುರಿಮರಿ, ಮರಿಹಂದಿಗಳ ಚಿತ್ರಗಳನ್ನು ತೋರಿಸುವ ಮೂಲಕ ಮಹಿಳೆ ಹಾಗೂ ಪುರುಷರ ಮೇಲೆ ಅವು ಬೀರುವ ಪ್ರಭಾವವನ್ನು ಸಂಶೋಧಕರು ಅಧ್ಯಯನಕ್ಕೆ ಒಳಪಡಿಸಿದ್ದರು. 

‘ಚಿತ್ರಗಳನ್ನು ನೋಡಿದ ಜನರು, ಮರಿಗಳ ಚೆಂದ, ಸೂಕ್ಷ್ಮತೆ, ಕೋಮಲತೆ ಹಾಗೂ ಅವುಗಳೆಡೆಗಿನ ಪ್ರೀತಿಯನ್ನು ತೋರಿದರು. ಮಹಿಳೆ ಮತ್ತು ಪುರುಷರ ತೋರಿದ ಭಾವನೆಗಳಲ್ಲಿ ಭಿನ್ನತೆ ಇತ್ತು. ಮಾಂಸ ಬೇಕೆಂಬ ಅಪೇಕ್ಷೆಗೆ ವಿರುದ್ಧವಾದ ನಡವಳಿಕೆ ಅವರಲ್ಲಿ ಕಂಡುಬಂದಿತು’ ಎಂದು ಸಂಶೋಧಕ ಜಾರೆಡ್ ಫಿಯಾಜ್ ಹೇಳಿದ್ದಾರೆ. 

ಮುದ್ದುಮರಿಗಳ ಮೇಲೆ ಹೆಣ್ಣುಮಕ್ಕಳು ಹೆಚ್ಚು ಪ್ರೀತಿ ಭಾವ ಹೊಂದಿರುತ್ತಾರೆ ಎಂಬ ಅಂಶವನ್ನು ಈ ಅಧ್ಯಯನ ಕಂಡುಕೊಂಡಿದೆ.

ಬರಹ ಇಷ್ಟವಾಯಿತೆ?

 • 19

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !