ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಮಲ್ಯ ಗಡಿಪಾರಿಗೆ ಬ್ರಿಟನ್‌ ಸರ್ಕಾರ ಸಮ್ಮತಿ

Last Updated 4 ಫೆಬ್ರುವರಿ 2019, 18:07 IST
ಅಕ್ಷರ ಗಾತ್ರ

ಲಂಡನ್:ಈಗ ಸ್ಥಗಿತಗೊಂಡಿರುವ ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಬ್ಯಾಂಕುಗಳಿಂದ ಪಡೆದ ಸುಮಾರು ₹9 ಸಾವಿರ ಕೋಟಿ ಬಾಕಿ ಉಳಿಸಿಕೊಂಡು ಬ್ರಿಟನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಅಲ್ಲಿನ ಗೃಹ ಕಾರ್ಯದರ್ಶಿ ಸಾಜಿದ್‌ ಸಾವಿದ್‌ ಆದೇಶಿಸಿದ್ದಾರೆ.

ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ಬ್ರಿಟನ್‌ ನ್ಯಾಯಾಲಯದಲ್ಲಿ ನಡೆದ ಕಾನೂನು ಹೋರಾಟದಲ್ಲಿ ಮಲ್ಯ ಅವರಿಗೆ ಕಳೆದ ಡಿಸೆಂಬರ್‌ನಲ್ಲಿ ಸೋಲಾಗಿತ್ತು.

ಹಸ್ತಾಂತರ ಆದೇಶ ಹೊರಡಿಸುವ ಅಧಿಕಾರ ಇರುವುದು ಗೃಹ ಕಾರ್ಯದರ್ಶಿಗೆ ಮಾತ್ರ ಹಾಗಾಗಿ ಮುಖ್ಯ ಮ್ಯಾಜಿಸ್ಟ್ರೇಟ್‌ ತೀರ್ಪನ್ನು ಗೃಹ ಕಾರ್ಯದರ್ಶಿಗೆ ಕಳುಹಿಸಲಾಗಿತ್ತು.ಮಲ್ಯ ವಿರುದ್ಧ ವಂಚನೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣಗಳಿವೆ ಎಂದು ಭಾರತ ಸರ್ಕಾರ ವಾದಿಸಿತ್ತು. ಹಾಗಾಗಿ, 2017ರ ಏಪ್ರಿಲ್‌ನಲ್ಲಿ ಸ್ಕಾಟ್ಲೆಂಡ್‌ ಯಾರ್ಡ್‌, ಮಲ್ಯ ವಿರುದ್ಧ ಹಸ್ತಾಂತರ ವಾರಂಟ್‌ ಹೊರಡಿಸಿತ್ತು. ಅದಕ್ಕೆ ಜಾಮೀನು ಪಡೆದುಕೊಂಡಿದ್ದರು. ಭಾರತದ ಜೈಲುಗಳು ಸರಿ ಇಲ್ಲ ಎಂದು ಮಲ್ಯ ಅವರು ಹಸ್ತಾಂತರವನ್ನು ವಿರೋಧಿಸಲು ಕಾರಣಕೊಟ್ಟಿದ್ದರು.

ಆದರೆ, ಮುಂಬೈನ ಜೈಲಿನ ದೃಶ್ಯಗಳನ್ನು ಚಿತ್ರೀಕರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು ಮತ್ತು ಮಲ್ಯ ಅವರ ಇತರ ಆಕ್ಷೇಪಗಳಿಗೂ ಸರ್ಕಾರ ಉತ್ತರ ನೀಡಿತ್ತು. ಈ ಎಲ್ಲವೂ ತೃಪ್ತಿಕರವಾಗಿವೆ ಎಂದು ನ್ಯಾಯಾಲಯ ಹೇಳಿತ್ತು.

ಆದಾಗ್ಯೂ, ಈ ಕ್ರಮದ ವಿರುದ್ಧ14 ದಿನಗಳ ಒಳಗಾಗಿನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಮಲ್ಯಗೆ ಅವಕಾಶವಿದೆ ಎನ್ನಲಾಗಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT