ಸೋಮವಾರ, ಏಪ್ರಿಲ್ 12, 2021
26 °C

ವರ್ಜೀನಿಯಾದಲ್ಲಿ ಅಪರಿಚಿತನಿಂದ ಗುಂಡಿನ ದಾಳಿ-11 ಮಂದಿ ಸಾವು, ಆರು ಮಂದಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರ್ಜೀನಿಯಾ: ಅಪರಿಚಿತ ನಡೆಸಿದ ಗುಂಡಿನ ದಾಳಿಗೆ 11 ನಾಗರಿಕರು ಮೃತಪಟ್ಟು ಆರು ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.

ವರ್ಜೀನಿಯಾ ಸಮುದ್ರ ತೀರದಲ್ಲಿರುವ ಸರ್ಕಾರಿ ಕಾಂಪ್ಲೆಕ್ಸ್‌‌ಗೆ ಬಂದ ವ್ಯಕ್ತಿ  ಜನಜಂಗುಳಿ ಇರುವ ಪ್ರದೇಶದತ್ತ ನುಗ್ಗಿ ಇದ್ದಕ್ಕಿದ್ದಂತೆ ರಿವಾಲ್ವರ್ನಿಂದ ಗುಂಡಿನ ದಾಳಿ ನಡೆಸಿದ್ದಾನೆ. ಪರಿಣಾಮ ಸ್ಥಳದಲ್ಲಿದ್ದ 11 ಮಂದಿ ನಾಗರೀಕರು ಮೃತಪಟ್ಟಿದ್ದಾರೆ. ಅಲ್ಲದೆ, 6 ಮಂದಿ ನಾಗರೀಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೆ ಸ್ಥಳದಲ್ಲಿದ್ದ ಪೊಲೀಸರು ನೌಕರನ ಮೇಲೆ ಪ್ರತಿ ದಾಳಿ ನಡೆಸಿದ್ದಾರೆ. ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಆತನ ಗುಂಡಿನ ದಾಳಿಗೆ ಪೊಲೀಸರೂ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರ್ಜೀನಿಯಾದ ಇತಿಹಾಸದಲ್ಲಿ ಇದೊಂದು ಕರಾಳ ದಿನ, ಇಲ್ಲಿನ ಜನರು ನಮ್ಮ ಸ್ನೇಹಿತರು, ಸಹ ಕೆಲಸಗಾರರು, ನೆರೆಹೊರೆಯವರು, ಸಹೋದ್ಯೋಗಿಗಳಾಗಿದ್ದಾರೆ. ಇದು ನಡೆಯಬಾರದ ಘಟನೆ ಎಂದು ಇಲ್ಲಿನ ಮೇಯರ್ ಬಾಬಿ ಡೈಯರ್ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಗಾಯಾಳುಗಳು ಇಲ್ಲಿನ ಸೆಂಟೆರಾ ವರ್ಜೀನಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಬ್ಬ ಗಾಯಾಳುವನ್ನು ಏರ್ ಲಿಫ್ಟ್ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಗುಂಡಿನ ದಾಳಿ ನಡೆದ ಸ್ಥಳದಲ್ಲಿ ಸುಮಾರು 30ಕ್ಕೂ ಹೆಚ್ಚು ಸರ್ಕಾರಿ ಕಟ್ಟಡಗಳಿವೆ. ಇವುಗಳಲ್ಲಿ ಸರ್ಕಾರಿ ಯೋಜನೆಗಳು, ಸಾರ್ವಜನಿಕ ಕಾಮಗಾರಿ,  ಸರ್ಕಾರಿ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಕೇಂದ್ರಗಳೂ ಇದ್ದು, ಸದಾ ನೌಕರರು ಹಾಗೂ ನಾಗರೀಕರಿಂದ ತುಂಬಿರುತ್ತವೆ. ಆತ ಯಾರು, ಇಂತಹ ಸ್ಥಳವನ್ನೇ ಆತ ಏಕೆ ಆಯ್ಕೆ ಮಾಡಿಕೊಂಡ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೇಯರ್ ಬಾಬಿ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು