ಜ್ವಾಲಾಮುಖಿ ಸ್ಫೋಟ: ಭಾರತ ಸಂಜಾತ ದಂಪತಿ ಸಾವು

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನಲ್ಲಿ ಜ್ವಾಲಾಮುಖಿ ಸ್ಫೋಟದಿಂದ ಗಾಯಗೊಂಡಿದ್ದ ಭಾರತ ಸಂಜಾತ ಹಾಗೂ ಅಮೆರಿಕದ ಉದ್ಯಮಿ ಪ್ರತಾಪ್ ಸಿಂಗ್ ಮೃತಪಟ್ಟಿದ್ದಾರೆ.
ಪ್ರತಾಪ್ ಅವರ ಪತ್ನಿ ಮಯೂರಿ ಡಿಸೆಂಬರ್ 22ರಂದು ಸಾವನ್ನಪ್ಪಿದ್ದರು. ದಂಪತಿ ನ್ಯೂಜಿಲೆಂಡ್‌ನ ವೈಟ್ ಐಲ್ಯಾಂಡ್‌ನಲ್ಲಿದ್ದಾಗ ಡಿಸೆಂಬರ್ 9ರಂದು ಜ್ವಾಲಾಮುಖಿ ಸ್ಫೋಟಗೊಂಡಿತ್ತು. ತೀವ್ರ ಸುಟ್ಟಗಾಯಗಳಾಗಿದ್ದ ಪ್ರತಾಪ್ ಅವರು ನ್ಯೂಜಿಲೆಂಡ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸ್ಫೋಟ ಸಂಭವಿಸುವಾಗ ದಂಪತಿಯ ಮೂವರು ಮಕ್ಕಳು ಮಯೂರಿ ಅವರ ತಾಯಿಯೊಂದಿಗೆ ಹಡಗಿನಲ್ಲಿದ್ದ ಕಾರಣ ಅವರಿಗೆ ಗಾಯಗಳಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಪ್ರವಾಸಿ ತಾಣಕ್ಕೆ ಭೇಟಿ ನೀಡಲು ರಾಯಲ್ ಕೆರಿಬಿಯನ್ ಹಡಗಿನಲ್ಲಿ 47 ಮಂದಿ ತೆರಳಿದ್ದರು. ಸ್ಫೋಟ ಸಂಭವಿಸಿದಾಗ 13 ಮಂದಿ ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದರು. ಅನಂತರ ಸಾವಿನ ಸಂಖ್ಯೆ 21ಕ್ಕೇರಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.