ಶುಕ್ರವಾರ, ಏಪ್ರಿಲ್ 3, 2020
19 °C

ಅಮೆರಿಕದಲ್ಲಿ ಯೋಗ ವಿ.ವಿ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಭಾರತದ ಹೊರಗಡೆ ಮೊದಲ ಯೋಗ ವಿಶ್ವವಿದ್ಯಾಲಯ ಅಮೆರಿಕದಲ್ಲಿ ವರ್ಷಾಂತ್ಯದಲ್ಲಿ ಆರಂಭವಾಗಲಿದೆ. ಭಾರತೀಯ ಪುರಾತನ ಯೋಗಾಭ್ಯಾಸ ಕುರಿತಾದ ಸಂಶೋಧನೆ ಇಲ್ಲಿ ನಡೆಯಲಿದೆ. 

ವಿವೇಕಾನಂದ ಯೋಗ ವಿಶ್ವವಿದ್ಯಾಲಯದ (ಯುಎವೈಯು) ಕ್ಯಾಂಪಸ್‌ ಲಾಸ್ ಏಂಜಲೀಸ್‌ನಲ್ಲಿ ₹35 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಕೇಸ್ ವೆಸ್ಟರ್ನ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಶ್ರೀ ಶ್ರೀನಾಥ್ ಅವರನ್ನು ವಿಶ್ವವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷರನ್ನಾಗಿ, ಭಾರತದ ಯೋಗಗುರು ಎಚ್.ಆರ್. ನಾಗೇಂದ್ರ ಅವರನ್ನು ಚೇರ್ಮನ್ ಆಗಿ ನೇಮಿಸಲಾಗಿದೆ. 

ಯೋಗದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‌ಗೆ ಇದೇ ಏಪ್ರಿಲ್‌ನಿಂದ ಪ್ರವೇಶಾತಿ ಆರಂಭವಾಗಲಿದೆ. ಕ್ಯಾಲಿಫೋರ್ನಿಯಾದ ಬ್ಯೂರೊ ಆಫ್ ಪ್ರೈವೇಟ್ ಪೋಸ್ಟ್ ಸೆಕೆಂಡರಿ ಎಜುಕೇಷನ್‌ನಿಂದ ಅನುಮತಿ ಸಿಕ್ಕ ಮೂರು ತಿಂಗಳ ಬಳಿಕ ವಿ.ವಿ ಪ್ರಾರಂಭದ ಘೋಷಣೆ ಪ್ರಕಟಿಸಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು