ಸೋಮವಾರ, ಏಪ್ರಿಲ್ 6, 2020
19 °C

ದೆಹಲಿ ಹಿಂಸಾಚಾರ | 79 ಮನೆ, 327 ಗುಡಿಸಲು ನಾಶ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ನವದೆಹಲಿಯ ಈಶಾನ್ಯ ಭಾಗದಲ್ಲಿ ನಡೆದ ಹಿಂಸಾಚಾರದಲ್ಲಿ 79 ಮನೆಗಳು, 327 ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ ಎಂದು ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹೇಳಿದ್ದಾರೆ.

ಪೊಲೀಸರ ಪ್ರಕಾರ 41 ಮಂದಿ ಮೃತಪಟ್ಟಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಗಲಭೆಯಲ್ಲಿ ನೊಂದವರಿಗೆ ಸರ್ಕಾರ ಈವರೆಗೆ ಒಟ್ಟು ₹ 38.75 ಲಕ್ಷ ಪರಿಹಾರ ವಿತರಿಸಿದೆ. ಮೃತರ ಕುಟುಂಬಗಳಿಗೆ ಒಟ್ಟು ₹ 22 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ವಿವರಿಸಿದರು.

ಈ ಮಧ್ಯೆ, 1000ಕ್ಕೂ ಅಧಿಕ ಸಂತ್ರಸ್ತರು ಮುಸ್ತಾಫಾಬಾದ್‌ನಲ್ಲಿ ತೆರೆದಿರುವ ಪರಿಹಾರ ಶಿಬಿರಕ್ಕೆ ಕಳೆದ 24 ಗಂಟೆಗಳಲ್ಲಿ ಬಂದಿದ್ದಾರೆ. ಬಹುತೇಕರು ಶಿವಪುರಿ, ಮುಸ್ತಾಫಾಬಾದ್‌, ಕರವಲ್‌ ನಗರ್‌ ಭಾಗದವರು ಎಂದು ಸರ್ಕಾರ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು