ಶುಕ್ರವಾರ, ಜನವರಿ 24, 2020
17 °C

ನೆಹರೂ–ಗಾಂಧಿ ಕುಟುಂಬವನ್ನು ಅಪಮಾನಿಸಿದ್ದ ನಟಿ ಪಾಯಲ್‌ಗೆ ಜಾಮೀನು ನಿರಾಕರಣೆ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಟಾ (ರಾಜಸ್ಥಾನ): ಬಾಲಿವುಡ್‌ ನಟಿ ಪಾಯಲ್ ರೋಹ್ಟಗಿಗೆ ಜಾಮೀನು ನೀಡಲು ಸ್ಥಳೀಯ ನ್ಯಾಯಾಲಯ ನಿರಾಕರಿಸಿದ್ದು, ಡಿಸೆಂಬರ್‌ 24ರ ತನಕ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ನೆಹರೂ ಹಾಗೂ ಗಾಂಧಿ ಕುಟುಂಬವನ್ನು ಅವಮಾನಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಆರೋಪ ಎದುರಿಸುತ್ತಿರುವ ಪಾಯಲ್ ಅವರನ್ನು ಸೋಮವಾರ ಬುಂಡಿ ಕೇಂದ್ರ ಜೈಲಿಗೆ ಕಳಿಸಲಾಗಿದೆ.

‘ಭಾನುವಾರ ರಾತ್ರಿ ಬಂಧಿಸಲಾಗಿದ್ದ ನಟಿಯನ್ನು ಸೋಮವಾರ ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟರ್ ಮುಂದೆ ಹಾಜರುಪಡಿಸಲಾಗಿತ್ತು’ ಎಂದು ಬುಂಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಮತಾ ಗುಪ್ತಾ ತಿಳಿಸಿದ್ದಾರೆ.

ಮೋತಿಲಾಲ್ ನೆಹರೂ, ಜವಾಹರಲಾಲ್‌ ನೆಹರೂ, ಇಂದಿರಾಗಾಂಧಿ ಹಾಗೂ ಕುಟುಂಬದ ಸದಸ್ಯರ ವಿರುದ್ಧ ಸೆಪ್ಟೆಂಬರ್‌ 6 ಹಾಗೂ 21ರಂದು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಮಾಡಿರುವ ಆರೋಪವನ್ನು ಪಾಯಲ್‌ ಎದುರಿಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು