ಆನಂದ್‌ ವಿರುದ್ಧದ ಎಫ್‌ಐಆರ್‌ ರದ್ದತಿಗೆ ನಕಾರ

7
ಎಲ್ಗರ್‌ ಪರಿಷದ್‌ – ಕೋರೆಗಾಂವ್‌ ಭೀಮಾ ಹಿಂಸಾಚಾರ ಪ್ರಕರಣ

ಆನಂದ್‌ ವಿರುದ್ಧದ ಎಫ್‌ಐಆರ್‌ ರದ್ದತಿಗೆ ನಕಾರ

Published:
Updated:

ನವದೆಹಲಿ: ಎಲ್ಗರ್‌ ಪರಿಷದ್‌ – ಕೋರೆಗಾಂವ್‌ ಭೀಮಾ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ಹಕ್ಕುಗಳ ಹೋರಾಟಗಾರ ಆನಂದ್‌ ತೆಲ್ತುಂಬೆ ವಿರುದ್ಧ ಪುಣೆ ಪೊಲೀಸರು ದಾಖಲಿಸಿದ ಎಫ್‌ಐಆರ್‌ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಜಾಗೊಳಿಸಿದೆ. 

ಆನಂದ್‌ ತೆಲ್ತುಂಬೆ ಅವರು ಮಾವೊವಾದಿಗಳ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿ ಪೊಲೀಸರು ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. 

ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಮತ್ತು ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌ ಮತ್ತು ಎಸ್.ಕೆ. ಕೌಲ್‌ ಅವರನ್ನು ಒಳಗೊಂಡ ಪೀಠ, ಎಫ್‌ಐಆರ್‌ ರದ್ದತಿಗೆ ನಿರಾಕರಿಸಿದರೂ, ಬಂಧನದ ಅವಧಿಯನ್ನು ಮತ್ತೆ ನಾಲ್ಕು ವಾರಗಳವರೆಗೆ ವಿಸ್ತರಿಸಿದೆ. ಈ ನಾಲ್ಕು ವಾರಗಳಲ್ಲಿ ಆನಂದ್‌ ಅವರನ್ನು ಬಂಧಿಸಬಾರದು ಎಂದೂ ಅದು ಪೊಲೀಸರಿಗೆ ಸೂಚನೆ ನೀಡಿದೆ. ಈ ಅವಧಿಯಲ್ಲಿ ಆನಂದ್‌ ಅವರು, ಅಧೀನ ನ್ಯಾಯಾಲಯದಲ್ಲಿಯೇ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದೂ ಅದು ಹೇಳಿದೆ. 

ಎಫ್‌ಐಆರ್‌ ರದ್ದು ಮಾಡುವಂತೆ ಕಳೆದ ಡಿ.21ರಂದು ಕೋರಿದ್ದ ಆನಂದ್‌ ಅವರ ಮನವಿಯನ್ನು ತಿರಸ್ಕರಿಸಿದ್ದ ಬಾಂಬೆ ಹೈಕೋರ್ಟ್‌, ಬಂಧನದಿಂದ ಮೂರು ವಾರಗಳ ವಿನಾಯ್ತಿಯನ್ನು ನೀಡಿತ್ತು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !