ಬುಧವಾರ, ಫೆಬ್ರವರಿ 26, 2020
19 °C

ಎಲ್‌ಒಸಿ ಆಯಕಟ್ಟಿನ ಭಾಗದಲ್ಲಿ ಟ್ಯಾಂಕ್ ನಿರೋಧಕ ಕ್ಷಿಪಣಿಗಳನ್ನು ನಿಯೋಜಿಸಿದ ಸೇನೆ

ಪಿಟಿಐ Updated:

ಅಕ್ಷರ ಗಾತ್ರ : | |

ಜಮ್ಮು: ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಭಾರತದ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಭಾರತೀಯ ಸೇನೆಯು ಇಸ್ರೇಲ್ ನಿರ್ಮಿತ ಟ್ಯಾಂಕ್ ನಿರೋಧಕ ಕ್ಷಿಪಣಿಗಳನ್ನು ನಿಯೋಜಿಸಿದೆ.

ಬಾಲಾಕೋಟ್‌ನಲ್ಲಿದ್ದ ಉಗ್ರರ ಶಿಬಿರಗಳ ಮೇಲೆ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು ದಾಳಿ ನಡೆಸಿದ ಪಾಕ್‌ ಸೇನೆಯು ಭಾರತದ ಗಡಿಗೆ ದೊಡ್ಡಮಟ್ಟದಲ್ಲಿ ಸೇನಾ ತುಕಡಿಗಳನ್ನು ನಿಯೋಜಿಸಿತ್ತು. ಈ ಹಿನ್ನೆಲೆಯಲ್ಲಿ ಟ್ಯಾಂಕ್ ನಿರೋಧಕ ಕ್ಷಿಪಣಿಗಳ ನಿಯೋಜನೆಗೆ ಭಾರತೀಯ ಸೇನೆಯು ಕಳೆದ ಕೆಲ ತಿಂಗಳುಗಳಿಂದ ಯೋಜನೆ ರೂಪಿಸಿತ್ತು.

ಗುರಿಯತ್ತ ಕರಾರುವಾಕ್ ದಾಳಿ ನಡೆಸಬಲ್ಲ ಈ ಅತ್ಯಾಧುನಿಕ ಕ್ಷಿಪಣಿಗಳನ್ನು ‘ಸ್ಪೈಕ್’ ಎಂದು ಕರೆಯಲಾಗುತ್ತದೆ. ಸ್ಪೈಕ್ ಕ್ಷಿಪಣಿ ವ್ಯವಸ್ಥೆ ಅಳವಡಿಸಿರುವುದನ್ನು ಸೇನೆಯ ಸೇನೆಯ ಉತ್ತರ ಕಮಾಂಡ್ ದೃಢಪಡಿಸಿದೆ.

ಕ್ಷಿಪಣಿ ಲಾಂಚರ್ (ಪ್ರಾತಿನಿಧಿಕ ಚಿತ್ರ)

ನಿಖರ ದಾಳಿ ಮತ್ತು ಗುರಿ ಮುಟ್ಟುವ ದಾಖಲೆಗಳಿಗೆ ಹೆಸರುವಾಸಿಯಾಗಿರುವ ಸ್ಪೈಕ್ ಕ್ಷಿಪಣಿಗಳು ಸೇನಾ ವಲಯದಲ್ಲಿ ‘ಹಾರಿಸಿ ಮರೆತುಬಿಡು’ (ಫೈರ್ ಆಂಡ್ ಫರ್ಗೆಟ್) ಎಂದೇ ಹೆಸರುವಾಸಿ. ಯೋಧರು ಹೊತ್ತೊಯ್ಯಲು ಸಾಧ್ಯವಾಗಿರುವ ಲಾಂಚರ್‌ಗಳ (ಉಡಾವಣಾ ಯಂತ್ರಗಳು) ಮೂಲಕ ನಾಲ್ಕು ಕಿ.ಮೀ. ದೂರದಿಂದಲೇ ಗುರಿಯನ್ನು ನಿರ್ಧರಿಸಿ ಈ ಕ್ಷಿಪಣಿಗಳನ್ನು ಉಡಾಯಿಸಬಹುದು. ಶ‌ಕ್ತಿಶಾಲಿ ಟ್ಯಾಂಕ್‌ಗಳು, ಕಟ್ಟಡಗಳು ಮತ್ತು ಬಂಕರ್‌ಗಳನ್ನು ಸ್ಫೋಟಿಸುವ ಸಾಮರ್ಥ್ಯ ಈ ಕ್ಷಿಪಣಿಗಳಿಗೆ ಇದೆ.

ಕಳೆದ ಅಕ್ಟೋಬರ್ 16ರ ನಂತರ ಕ್ಷಿಪಣಿಗಳನ್ನು ಗಡಿಯಲ್ಲಿ ನಿಯೋಜಿಸುವ ಕಾರ್ಯ ಆರಂಭಿಸಲಾಯಿತು. ಇದೀಗ ಈ ಕ್ಷಿಪಣಿಗಳು ಬಳಕೆಗೆ ಸಿದ್ಧವಾಗಿವೆ. ಇಸ್ರೇಲ್‌ನಿಂದ ಸೇನೆಯು ತುರ್ತು ಖರೀದಿ ಯೋಜನೆಯಡಿ ₹280 ಕೋಟಿ ಮೊತ್ತದ 12 ಲಾಂಚರ್‌ಗಳು ಮತ್ತು 210 ಕ್ಷಿಪಣಿಗಳನ್ನು ಖರೀದಿಸಿದೆ.

ಪರ್ವತ ಶಿಖರ ಮತ್ತು ಸಮತಟ್ಟು ಭೂಮಿಯಿಂದಲೂ ಈ ಕ್ಷಿಪಣಿಗಳನ್ನು ಉಡಾಯಿಸಬಹುದಾಗಿದೆ. ವಾಹನಗಳು, ಹೆಲಿಕಾಪ್ಟರ್‌ಗಳು, ಹಡಗುಗಳಿಗೂ ಲಾಂಚರ್‌ಗಳನ್ನು ಅಳವಡಿಸಲು ಅವಕಾಶವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು