ರಾಜ್ಯಸಭಾ ಉಪಸಭಾಪತಿ ಚುನಾವಣೆ: ಕಾಂಗ್ರೆಸ್‌ನಿಂದ ಬಿ.ಕೆ.ಹರಿಪ್ರಸಾದ್‌ ಸ್ಫರ್ಧೆ

7

ರಾಜ್ಯಸಭಾ ಉಪಸಭಾಪತಿ ಚುನಾವಣೆ: ಕಾಂಗ್ರೆಸ್‌ನಿಂದ ಬಿ.ಕೆ.ಹರಿಪ್ರಸಾದ್‌ ಸ್ಫರ್ಧೆ

Published:
Updated:

ನವದೆಹಲಿ: ರಾಜ್ಯಸಭಾ ಉಪಸಭಾಪತಿ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿ.ಕೆ. ಹರಿಪ್ರಸಾದ್‌ ಅವರು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸಲು ಇಂದು ಕೊನೆ ದಿನವಾಗಿತ್ತು. ಬಿಜೆಪಿ ಅಭ್ಯರ್ಥಿಯಾಗಿ ಹರಿವಂಶ ನಾಯರಾಣ್‌ ಸಿಂಗ್‌ ಕಣದಲ್ಲಿದ್ದಾರೆ. ಅವರನ್ನು ಸೋಲಿಸಲು ಹಲವು ಪಕ್ಷಗಳು ಒಟ್ಟಾಗಿದ್ದು, ಆಗಸ್ಟ್‌ 9ರಂದು (ಗುರುವಾರ) ಚುನಾವಣೆ ನಡೆಯಲಿದೆ.

64 ವರ್ಷದ ಹರಿಪ್ರಸಾದ್‌ ಕರ್ನಾಟಕದಿಂದ ಆಯ್ಕೆಯಾದ ರಾಜ್ಯಸಭಾ ಸದಸ್ಯರಾಗಿದ್ದಾರೆ. 

‘ಪಕ್ಷದ ನಾಯಕರು ಇತರೆ ಪಕ್ಷಗಳೊಂದಿಗೆ ಚರ್ಚಿಸಿ ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ’ ಎಂದು ಹರಿಪ್ರಸಾದ್‌ ತಿಳಿಸಿದ್ದಾರೆ. 

ಚುನಾವಣೆಯಲ್ಲಿ 245 ಮಂದಿ ರಾಜ್ಯಸಭಾ ಸದಸ್ಯರು ಮತದಾನ ಮಾಡಲಿದ್ದಾರೆ. ಇದರಲ್ಲಿ 123 ಮತಗಳನ್ನು ಗಳಿಸಿದವರು ಜಯಶಾಲಿ ಆಗಲಿದ್ದಾರೆ. 

ಎಐಎಡಿಎಂಕೆ, ಕೆ.ಚಂದ್ರಶೇಖರ್‌ ರಾವ್‌ (ಟಿಆರ್‌ಎಸ್‌), ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜು ಜನತಾದಳ (ಬಿಜೆಡಿ) ಪಕ್ಷಗಳ ಬೆಂಬಲ ದೊರೆಯಲಿದೆ ಎನ್ನುವುದು ಬಿಜೆಪಿ ವಿಶ್ವಾಸವಾಗಲಿದೆ. 

ಬಿಜೆಪಿಗೆ ವಿರುದ್ಧವಾಗಿ ಚಂದ್ರಬಾಬು ನಾಯ್ಡು( ಟಿಡಿಪಿ), ಅರವಿಂದ್‌ ಕೇಜ್ರಿವಾಲ್‌(ಎಎಪಿ), ಮೆಹಬೂಬ ಮುಫ್ತಿ (ಪಿಡಿಪಿ), ಡಿಎಂಕೆ, ಹಾಗೂ ವೈಎಸ್‌ಆರ್‌ ಕಾಂಗ್ರೆಸ್‌ ತಮ್ಮ ಅಭ್ಯರ್ಥಿಗೆ ಬೆಂಬೆಲಿಸಲಿವೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !