ಹುಟ್ಟುಹಬ್ಬಕ್ಕೆ ಅರ್ಧದಿನ ರಜೆ

7

ಹುಟ್ಟುಹಬ್ಬಕ್ಕೆ ಅರ್ಧದಿನ ರಜೆ

Published:
Updated:

ನವದೆಹಲಿ: ಇಂಡೊ ಟಿಬೆಟನ್‌ ಗಡಿ ಪೊಲೀಸ್‌ ಪಡೆ (ಐಟಿಬಿಪಿ) ತನ್ನ ಯೋಧರಿಗೆ ಸಂತಸದ ಸುದ್ದಿ ನೀಡಿದೆ. ಇನ್ನು ಮುಂದೆ ಹುಟ್ಟುಹಬ್ಬದಂದು ಯೋಧರಿಗೆ ಅರ್ಧ ದಿನ ರಜೆ ನೀಡಲಾಗುತ್ತದೆ. ಆಗ ಅವರು ಸಮವಸ್ತ್ರ ತ್ಯಜಿಸಿ ತಮ್ಮಿಷ್ಟದ ಬಟ್ಟೆ ಧರಿಸಬಹುದು, ಕೇಕ್‌ ಕತ್ತರಿಸಿ ಸಂಭ್ರಮಿಸಬಹುದು.

ಮನೆಯಿಂದ ದೂರವಾಗಿ ಕರ್ತವ್ಯದ ಮೇಲೆಯೇ ಹೆಚ್ಚು ಕಾಲ ಕಳೆಯುವ ಯೋಧರಲ್ಲಿ ನೈತಿಕತೆ ವೃದ್ಧಿಸುವ ಸಲುವಾಗಿ ಈ ಅನುಕೂಲ ಮಾಡಿಕೊಡಲಾಗಿದೆ.

ಪಂಜಾಬ್‌ನ ಪಟಿಯಾಲದ 15ನೇ ಬೆಟಾಲಿಯನ್‌ನ ಕಮಾಂಡಿಂಗ್ ಅಧಿಕಾರಿ ಈ ಸಂಬಂಧ ಆದೇಶವೊಂದನ್ನು ಹೊರಡಿಸಿದ್ದಾರೆ. ಯೋಧರ ಹುಟ್ಟುಹಬ್ಬದಂದು ಅವರ ಹೆಸರನ್ನು ನೋಟಿಸ್‌ ಬೋರ್ಡಿನ ಮೇಲೆ ಹಾಕಲಾಗುತ್ತದೆ. ಅವರಿಗೆ ಹಿರಿಯ ಅಧಿಕಾರಿಯೊಬ್ಬರು ಬೊಕ್ಕೆ ನೀಡಿ ಶುಭ ಹಾರೈಸಲಿದ್ದಾರೆ.

ಬರಹ ಇಷ್ಟವಾಯಿತೆ?

  • 4

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !