ಸಹೋದ್ಯೋಗಿ ಹತ್ಯೆ ಮಾಡಿದ ಯೋಧ

7

ಸಹೋದ್ಯೋಗಿ ಹತ್ಯೆ ಮಾಡಿದ ಯೋಧ

Published:
Updated:

ಗಾಜಿಯಾಬಾದ್‌ : ಗಡಿ ಭದ್ರತಾ ಪಡೆಯ ಯೋಧ ಅಜಿತ್‌ ಅವರು, ಸಹೋದ್ಯೋಗಿ ಜಗಪ್ರೀತ್‌ ಎಂಬುವರನ್ನು ಸೋಮವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಗುರುಗ್ರಾಮದಲ್ಲಿರುವ ಗಡಿ ಕಾವಲು ಪಡೆಯ 95ನೇ ಬೆಟಾಲಿಯನ್‌ನ ಇಬ್ಬರನ್ನು ಗಾಜಿಯಾಬಾದ್‌ನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಿಯೋಜನೆ ಮಾಡಲಾಗಿತ್ತು.

 ಇಬ್ಬರ ನಡುವೆ ಬೆಳಿಗ್ಗೆ ವಾಗ್ವಾದ ನಡೆದಿದ್ದು, ಸಿಟ್ಟಿಗೆದ್ದ ಅಜಿತ್‌ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಘಟನೆಗೆ ನಿಖರವಾದ ಕಾರಣ ತಿಳಿಯಲು ತನಿಖೆಗೆ ಆದೇಶ ನೀಡಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !