ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌: ಸೈನಾ, ಪ್ರಣಯ್‌ಗೆ ನಿರಾಸೆ

Last Updated 28 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ವುಹಾನ್‌, ಚೀನಾ: ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲಿ ಭಾರತದ ಸೈನಾ ನೆಹ್ವಾಲ್‌ ಹಾಗೂ ಎಚ್‌. ಎಸ್‌. ಪ್ರಣಯ್‌ ಅವರು ಮುಗ್ಗರಿಸಿದ್ದಾರೆ. ಇದರೊಂದಿಗೆ ಚಾಂಪಿಯನಷಿಪ್‌ನಲ್ಲಿ ಭಾರತದ ಆಟಗಾರರರ ಸವಾಲು ಅಂತ್ಯವಾಗಿದೆ.

ಶನಿವಾರ ನಡೆದ ಮಹಿಳೆಯರ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಸೈನಾ ಅವರನ್ನು ಹಾಲಿ ಚಾಂಪಿಯನ್‌ ಚೀನಾ ತೈಪೆಯ ತಿಯಾ ಜು ಯಿಂಗ್‌ 25–27, 19–21ರ ನೇರ ಗೇಮ್‌ಗಳಿಂದ ಸೋಲಿಸಿದರು. ಭಾರತದ ಆಟಗಾರ್ತಿ ಅಲ್ಪ ಅಂತರದಲ್ಲಿ ಸೋತರು. ಇದೇ ಋತುವಿನಲ್ಲಿ ಸೈನಾ ಅವರನ್ನು ತಿಯಾ ಮೂರನೇ ಬಾರಿ ಮಣಿಸಿದರು.  

ರೋಚಕ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ಸೈನಾ, ಎದುರಾಳಿಗೆ ಪ್ರಬಲ ಪೈಪೋಟಿ ನೀಡಿದರು. ಪಂದ್ಯದ ಆರಂಭದಲ್ಲಿ ತಿಯಾ ಮೇಲುಗೈ ಸಾಧಿಸುತ್ತಿದ್ದಂತೆ ಸೈನಾ ವೇಗದ ಆಟಕ್ಕೆ ಇಳಿದರು. ಇಬ್ಬರು ಆಟಗಾರ್ತಿಯರು ಸಮಬಲ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಉಭಯ ಆಟಗಾರ್ತಿಯರು ತಮ್ಮ ಸ್ಮ್ಯಾಷ್‌ ಹಾಗೂ ಡ್ರಾಪ್‌ಗಳ ಮೂಲಕ ಮನಸೆಳೆದರು.

ಆದರೆ, ಆರಂಭದ ಗೇಮ್‌ನ ಕೊನೆಯಲ್ಲಿ ಸಿಕ್ಕ ಅವಕಾಶಗಳನ್ನು ಸೈನಾ ಕೈಚೆಲ್ಲಿದರು. ಇದನ್ನೇ ಬಳಸಿಕೊಂಡ ತಿಯಾ ಮೊದಲನೇ ಗೇಮ್‌ ತಮ್ಮದಾಗಿ
ಸಿಕೊಂಡರು. ಎರಡನೇ ಗೇಮ್‌ನ ಆರಂಭದಿಂದಲೂ ಎದುರಾಳಿಯ ತಪ್ಪುಗಳಿಂದಾಗಿ ಸೈನಾ ಮುನ್ನಡೆ ಸಾಧಿಸಿದರು. ಕೂಡಲೇ ಎಚ್ಚೆತ್ತುಕೊಂಡ ತಿಯಾ ಸಮಬಲದ ಪೈಪೋಟಿ ನೀಡಿದರು. ಆಕರ್ಷಕ ರಿಟರ್ನ್‌ ಹಾಗೂ ಸ್ಮ್ಯಾಷ್‌ಗಳ ಮೂಲಕ ತಿಯಾ ಮುನ್ನಡೆ ಸಾಧಿಸಿ ಪಂದ್ಯವನ್ನು ಜಯಿಸಿದರು.

ಪ್ರಣಯ್‌ಗೆ ಸೋಲು: ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಹೆಗ್ಗಳಿಕೆ ಹೊಂದಿರುವ ಚೀನಾದ ಚೆನ್‌ ಲಾಂಗ್‌ ವಿರುದ್ಧ ಪ್ರಣಯ್‌ ಅವರು 16–21, 18–21ರ ನೇರ ಗೇಮ್‌ಗಳಿಂದ ಪರಾಭವಗೊಂಡರು.

ಪಂದ್ಯದ ಆರಂಭದಲ್ಲಿ ಸ್ವಲ್ಪ ಮುನ್ನಡೆ ಗಳಿಸಿದ ಪ್ರಣಯ್‌, ನಂತರ ಚೆನ್‌ ಅವರ ಬಿರುಸಿನ ಆಟದಿಂದ ಒತ್ತಡಕ್ಕೊಳಗಾದರು. ಅನಗತ್ಯ ತಪ್ಪುಗಳಿಂದ ಎದುರಾಳಿಗೆ ಪಾಯಿಂಟ್ಸ್‌ ಬಿಟ್ಟುಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT