ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಲಹಾಬಾದ್ ಇನ್ನು ಪ್ರಯಾಗ್‌ರಾಜ್’

ಉತ್ತರ ಪ್ರದೇಶ ಸಂಪುಟ ಸಭೆಯಲ್ಲಿ ನಿರ್ಣಯ
Last Updated 16 ಅಕ್ಟೋಬರ್ 2018, 18:59 IST
ಅಕ್ಷರ ಗಾತ್ರ

ಲಖನೌ:ಐತಿಹಾಸಿಕ ನಗರಿಅಲಹಾಬಾದ್ ಅನ್ನು ಪ್ರಯಾಗ್‌ರಾಜ್ ಎಂದು ಮರುನಾಮಕರಣ ಮಾಡಲು ಉತ್ತರ ಪ್ರದೇಶ ಸಂಪುಟ ಸಭೆಯಲ್ಲಿ ಮಂಗಳವಾರ ನಿರ್ಣಯ ಅಂಗೀಕರಿಸಲಾಗಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಬದಲಾದ ಹೆಸರು ಮಂಗಳವಾರದಿಂದಲೇ ಜಾರಿಗೆ ಬಂದಿದೆ.

‘ಹೆಸರು ಬದಲಾಯಿಸಲು ಕೈಗೊಳ್ಳಬೇಕಿರುವ ಪ್ರಕ್ರಿಯೆ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗುತ್ತದೆ’ ಎಂದು ರಾಜ್ಯ ಸಚಿವ ಸಿದ್ದಾರ್ಥನಾಥ ಸಿಂಗ್ ತಿಳಿಸಿದ್ದಾರೆ.

ಕಳೆದ ಶನಿವಾರ ಅಲಹಾಬಾದ್‌ಗೆ ತೆರಳಿದ್ದ ಮುಖ್ಯಮಂತ್ರಿ, 2019ರ ಕುಂಭಮೇಳಕ್ಕೂ ಮುನ್ನ ಅಲಹಾಬಾದ್ ಹೆಸರು ಬದಲಾಯಿಸಲು ಪ್ರಸ್ತಾವ ಇದೆ ಎಂದು ತಿಳಿಸಿದ್ದರು.ಇದೀಗಹೆಸರು ಬದಲಾಯಿಸಿದ ಉತ್ತರ ಪ್ರದೇಶ ಸರ್ಕಾರದ ಕ್ರಮಕ್ಕೆ ವಿರೋಧ ಪಕ್ಷಗಳು ಟೀಕೆ ವ್ಯಕ್ತಪಡಿಸಿವೆ.

ಕೆಲವು ವರ್ಗಗಳಿಂದ ಆಕ್ಷೇಪ ವ್ಯಕ್ತವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಸಿದ್ದಾರ್ಥನಾಥ ಸಿಂಗ್ ಅವರು, ‘ಆಕ್ಷೇಪ ಹೊಂದಿರುವವರು ತಮ್ಮ ನಿಲುವು ಮರುಪರೀಕ್ಷಿಸಿಕೊಳ್ಳಲಿ. ಪ್ರಯಾಗ್‌ರಾಜ್‌ ಹೆಸರು ಋಗ್ವೇದ, ಮಹಾಭಾರತ ಹಾಗೂ ರಾಮಾಯಣದಲ್ಲೂ ಉಲ್ಲೇಖವಾಗಿದೆ. ಆದರೆ ಸುಮಾರು 500 ವರ್ಷಗಳ ಹಿಂದೆ ಇದನ್ನು ಅಲಹಾಬಾದ್ ಎಂದು ಬದಲಿಸಲಾಯಿತು.

ಗಂಗಾ, ಯಮುನಾ, ಪುರಾಣದಲ್ಲಿ ಉಲ್ಲೇಖವಿರುವ ಸರಸ್ವತಿ ನದಿ ಸಂಗಮವಾಗುವ ಸ್ಥಳ ಪ್ರಯಾಗ’ ಎಂದಿದ್ದಾರೆ.

‘ಹೆಸರು ಬದಲಿಸಿರುವುದರಿಂದಾಗಿ, ಸ್ವಾತಂತ್ರ್ಯಾನಂತರದಲ್ಲಿ ಪ್ರಮುಖ ಪಾತ್ರ ವಹಿಸಿರುವ ಅಲಹಾಬಾದ್ಇತಿಹಾಸದ ಮೇಲೆ ಪರಿಣಾಮವಾಗಬಹುದು’ ಎಂದು ಕಾಂಗ್ರೆಸ್ ಹೇಳಿದೆ.

‘ಕುಂಭ ನಡೆಯುವ ಸ್ಥಳಕ್ಕೆ ಪ್ರಯಾಗ್‌ರಾಜ್‌ ಎಂದೇ ಕರೆಯಲಾಗುತ್ತದೆ.ಸರ್ಕಾರಕ್ಕೆ ಹೆಚ್ಚಿನ ಆಸಕ್ತಿ ಇದ್ದರೆ ಅದನ್ನು ಪ್ರತ್ಯೇಕ ನಗರವಾಗಿ ಮಾಡಲಿ. ಆದರೆ ಅಲಹಾಬಾದ್ ಹೆಸರು ಬದಲಿಸಬಾರದು’ ಎಂದು ಕಾಂಗ್ರೆಸ್ ವಕ್ತಾರ ಓಂಕಾರ್ ಸಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT