ರಾಜ್ಯಗಳಿಗೆ 35 ಲಕ್ಷ ಟನ್‌ ಬೇಳೆಕಾಳು ಬಿಡುಗಡೆ: ಪ್ರತಿ ಕೆ.ಜಿ.ಗೆ ₹15 ರಿಯಾಯಿತಿ

7

ರಾಜ್ಯಗಳಿಗೆ 35 ಲಕ್ಷ ಟನ್‌ ಬೇಳೆಕಾಳು ಬಿಡುಗಡೆ: ಪ್ರತಿ ಕೆ.ಜಿ.ಗೆ ₹15 ರಿಯಾಯಿತಿ

Published:
Updated:

ನವದೆಹಲಿ: ಕೇಂದ್ರ ಸರ್ಕಾರವು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ವಿತರಿಸಲು ಪ್ರತಿ ಕೆ.ಜಿ.ಗೆ ₹15 ರಿಯಾಯಿತಿ ದರದಂತೆ ಒಟ್ಟು 35 ಲಕ್ಷ ಟನ್‌ಗಳಷ್ಟು ಬೇಳೆಕಾಳುಗಳನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಿದೆ. ಈ ಯೋಜನೆ ಅನುಷ್ಠಾನಕ್ಕೆ ಸರ್ಕಾರ ₹5,237 ಕೋಟಿ ವಿನಿಯೋಗಿಸಲಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಹಣಕಾಸು ವ್ಯವಹಾರಗಳ ಸಂಸದೀಯ ಸಮಿತಿಯು ಬೇಳೆಕಾಳುಗಳ ಬಿಡುಗಡೆಗೆ ಒಪ್ಪಿಗೆ ಸೂಚಿಸಿತು. ‘ಮೊದಲು ಬಂದವರಿಗೆ ಮೊದಲ ಆದ್ಯತೆ’ ಅನುಸಾರ ರಾಜ್ಯಗಳಿಗೆ ಏಕಕಾಲದಲ್ಲಿ ಬೇಳೆಕಾಳು ಪೂರೈಸಲು ನಿರ್ಧರಿಸಲಾಯಿತು.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಬೇಳೆಕಾಳುಗಳನ್ನು ಪಿಡಿಎಸ್‌ (ಸಾರ್ವಜನಿಕ ವಿತರಣಾ ವ್ಯವಸ್ಥೆ), ಮಧ್ಯಾಹ್ನದ ಬಿಸಿಯೂಟ ಯೋಜನೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೂ (ಐಸಿಡಿಪಿ)ಬಳಸಿಕೊಳ್ಳಬಹುದಾಗಿದೆ.

ದೇಶದಲ್ಲಿ ಕಳೆದ ಎರಡು ವರ್ಷಗಳಲ್ಲಿ ಸಾರ್ವಕಾಲಿಕ ದಾಖಲೆ ಪ್ರಮಾಣದಲ್ಲಿ ಬೇಳೆಕಾಳು ಉತ್ಪಾದನೆಯಾಗಿದೆ. 2017–18ರಲ್ಲಿ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸುಮಾರು 45.43 ಲಕ್ಷ ಟನ್‌ ಬೇಳೆ ಕಾಳು ಖರೀದಿಸಿತ್ತು. 12 ತಿಂಗಳ ಅವಧಿಯಲ್ಲಿ ಅಂದರೆ ಮುಂದಿನ ಖಾರೀಫ್‌ ಅವಧಿ ಆರಂಭವಾಗುವುದರೊಳಗೆ ದಾಸ್ತಾನು ಇರುವ ಬೇಳೆಕಾಳು ವಿಲೇವಾರಿ ಮಾಡಬೇಕಾಗಿದೆ. ಹಾಗಾಗಿ ರಾಜ್ಯಗಳಿಗೆ ರಿಯಾಯಿತಿ ದರದಲ್ಲಿ ಬೇಳೆಕಾಳು ಪೂರೈಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಚಿವ ರವಿಶಂಕರ್‌ ಪ್ರಸಾದ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !