ಭಾನುವಾರ, ನವೆಂಬರ್ 17, 2019
21 °C

ಛತ್‌ಪೂಜಾ : ಮಕ್ಕಳು ಸೇರಿ ನಾಲ್ವರು ಸಾವು

Published:
Updated:

ಪಟ್ನಾ: ಬಿಹಾರದಲ್ಲಿ ಭಾನುವಾರ ಛತ್‌ ಪೂಜಾ ಸಂದರ್ಭದಲ್ಲಿ ನಡೆದ ಎರಡು ಪ್ರತ್ಯೇಕ ದುರಂತಗಳಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸಮಸ್ತಿಪುರ ಜಿಲ್ಲೆಯ ಬಡ್‌ಗಾಂವ್‌ ಹಳ್ಳಿಯ ಕಾಳಿ ದೇವಸ್ಥಾನದ ಒಂದು ಭಾಗ ಕುಸಿದು ಬಿದ್ದುದರಿಂದ ದೇವಸ್ಥಾನದ ಒಳಗೆ ಛತ್‌ ಪೂಜಾ ನೆರವೇರಿಸುತ್ತಿದ್ದ ಲಲ್ಲಿ ದೇವಿ ಮತ್ತು ಬುಚಿ ದೇವಿ ಎಂಬ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.

ನದಿ ದಂಡೆಯಲ್ಲಿ ಅರ್ಘ್ಯ ಪ್ರದಾನ ಮಾಡಿದ ಬಳಿಕ ಭಕ್ತರು ಹೊರಡಲು ಅನುವಾಗುವ ಸಂದರ್ಭದಲ್ಲಿ ದೇವಸ್ಥಾನದ ಗೋಡೆ ಕುಸಿದು ಬಿತ್ತು. ಅವಶೇಷಗಳಡಿ ಆರೇಳು ಮಂದಿ ಮಹಿಳೆಯರು ಸಿಕ್ಕಿಹಾಕಿಕೊಂಡಿದ್ದು, ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಸಾವನ್ನಪ್ಪಿದ ಮಹಿಳೆಯರ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಠಾಣೆಯ ಮುಖ್ಯಾಧಿಕಾರಿ ಚಂದ್ರಕಾಂತ್‌ ಗೌರಿ ಹೇಳಿದ್ದಾರೆ.

ಮತ್ತೊಂದು ಘಟನೆಯಲ್ಲಿ ಔರಂಗಾಬಾದ್‌ ಜಿಲ್ಲೆಯ ಸೂರ್ಯಕುಂಡದ ಬಳಿ ಮಕ್ಕಳಾದ ಪಟ್ನಾ ನಿವಾಸಿ ಬೇಬಿ(7) ಮತ್ತು ಭೋಜಪುರದ ಪ್ರಿನ್ಸ್‌ ಕುಮಾರ್‌ (4) ಕಾಲ್ತುಳಿತಕ್ಕೆ ಸಿಕ್ಕಿ ಸಾವನ್ನಪ್ಪಿದ್ದಾರೆ ಎಂದು ಔರಂಗಾಬಾದ್‌ ಜಿಲ್ಲಾಧಿಕಾರಿ ರಾಹುಲ್‌ ರಂಜನ್‌ ಮಹಿವಾಲ್‌ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)