ಕ್ರೈಸ್ತ ಸನ್ಯಾಸಿನಿ ಗುರುತು ಬಹಿರಂಗ

7

ಕ್ರೈಸ್ತ ಸನ್ಯಾಸಿನಿ ಗುರುತು ಬಹಿರಂಗ

Published:
Updated:

ಕೋಟಯಂ/ ಕೊಚ್ಚಿ: ಬಿಷಪ್‌ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಕ್ರೈಸ್ತ ಸನ್ಯಾಸಿನಿಯ ಭಾವಚಿತ್ರವನ್ನು ಬಹಿರಂಗಗೊಳಿಸುವ ಮೂಲಕ ಜೀಸಸ್‌ ಮಿಷನರಿ ಸಭಾ ಅತ್ಯಾಚಾರ ನಿಗ್ರಹ ಕಾನೂನು ಉಲ್ಲಂಘಿಸಿದೆ.

ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರ ಗುರುತನ್ನು ಬಹಿರಂಗಗೊಳಿಸುವಂತಿಲ್ಲ ಎಂದು ಕಾನೂನಿನಲ್ಲಿದೆ.

ಅತ್ಯಾಚಾರ ಆರೋಪ ಎದುರಿಸುತ್ತಿರುವ ಬಿಷಪ್‌ ಫ್ರಾನ್ಸೊ ಮುಲ್ಲಕ್ಕಲ್‌ ಪರ ಮಾಧ್ಯಮಗೋಷ್ಠಿ ನಡೆಸಿದ್ದ ಜೀಸಸ್‌ ಮಿಷನರಿ ಸಭಾ, 2015ರ ಮೇ 23ರಂದು ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಸಂತ್ರಸ್ತ ಸನ್ಯಾಸಿನಿಯು ಮುಲ್ಲಕ್ಕಲ್‌ ಅವರೊಂದಿಗಿದ್ದ ಭಾವಚಿತ್ರವನ್ನು ಪ್ರದರ್ಶಿಸಿದ್ದರು.

‘ಸಂತ್ರಸ್ತೆಯ ಭಾವಚಿತ್ರವನ್ನು ಮಾಧ್ಯಮಗಳು ಪ್ರಕಟಿಸಿದರೆ ಅದು ನಮ್ಮ ಜವಾಬ್ದಾರಿಯಲ್ಲ. ಭಾವಚಿತ್ರ ಪ್ರಕಟಿಸುವಂತೆ ನಾವು ಕೋರಿರಲಿಲ್ಲ’ ಎಂದು ಜೀಸಸ್‌ ಮಿಷನರಿ ಹೇಳಿದೆ.

‘ಸಂತ್ರಸ್ತ ಸನ್ಯಾಸಿನಿ ಹಲವು ಬಾರಿ ಬಿಷಪ್‌ ಜೊತೆಗೆ ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಸಂತ್ರಸ್ತ ಸನ್ಯಾಸಿನಿಯ ಜೊತೆ ಇತರೆ ಐವರು ಸನ್ಯಾಸಿನಿಯರು ಮತ್ತು ಇತರೆ ನಾಲ್ವರು ಬಿಷಪ್‌ ವಿರುದ್ಧ ಪಿತೂರಿ ನಡೆಸಿದ್ದಾರೆ’ ಎಂದು ಸಭೆ ಆರೋಪಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !