ನೋಟು ಬದಲಾವಣೆ ತನಿಖೆಗೆ ಕಾಂಗ್ರೆಸ್ ಪಟ್ಟು

6
ಅಮಿತ್‌ ಶಾ ವಿರುದ್ಧದ ಆರೋಪ

ನೋಟು ಬದಲಾವಣೆ ತನಿಖೆಗೆ ಕಾಂಗ್ರೆಸ್ ಪಟ್ಟು

Published:
Updated:

ನವದೆಹಲಿ: ನೋಟು ರದ್ದತಿಯ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನಿರ್ದೇಶಕರಾಗಿರುವ ಅಹಮದಾಬಾದ್‌ ಜಿಲ್ಲಾ ಸಹಕಾರಿ ಬ್ಯಾಂಕ್‌ನಲ್ಲಿ ₹745.58 ಕೋಟಿ ಮೊತ್ತದ ಹಳೆಯ ನೋಟುಗಳನ್ನು ಠೇವಣಿ ಮಾಡಿದ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಕಾಂಗ್ರೆಸ್‌ ಒತ್ತಾಯಿಸಿದೆ.

‘ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ’ ಎಂದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌) ಪ್ರಕಟಣೆ ನೀಡಿದೆ. ಕಾಂಗ್ರೆಸ್‌ ಆರೋಪ ಹೊರ ಬೀಳುವ ಕೆಲ ಗಂಟೆಗಳ ನಬಾರ್ಡ್‌ ಈ ಪ್ರಕಟಣೆ ಹೊರಡಿಸಿದೆ.

‘ಪ್ರಧಾನಿ ಮೋದಿ ನೋಟು ರದ್ದು ಮಾಡಿದ ಕೇವಲ ಐದು ದಿನದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ನಿರ್ದೇಶಕರಾಗಿರುವ ಅಹಮದಾಬಾದ್‌ ಜಿಲ್ಲಾ ಸಹಕಾರಿ ಬ್ಯಾಂಕ್‌ ₹750 ಕೋಟಿ ಹಳೆಯ ನೋಟು ಬದಲಾಯಿಸುವ ಮೂಲಕ ಮೊದಲ ಬಹುಮಾನ ಗಳಿಸಿದೆ. ಅದಕ್ಕಾಗಿ ಶುಭಾಶಯಗಳು’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಟ್ವೀಟ್‌ನಲ್ಲಿ ಲೇವಡಿ ಮಾಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 15

  Happy
 • 2

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !