ಶನಿವಾರ, ಜನವರಿ 18, 2020
21 °C
ಮಹಾರಾಷ್ಟ್ರ ಸಚಿವೆ ಹೇಳಿಕೆಗೆ ವ್ಯಕ್ತವಾಗಿತ್ತು ಆಕ್ಷೇಪ

ಗೋವಿನ ಸ್ಪರ್ಶದಿಂದ ನಕಾರಾತ್ಮಕತೆ ದೂರ: ಹೇಳಿಕೆ ಸಮರ್ಥಿಸಿದ ‘ಕೈ’ ನಾಯಕಿ ಯಶೋಮತಿ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಗೋವಿನ ಸ್ಪರ್ಶದಿಂದ ನಕಾರಾತ್ಮಕತೆ ದೂರವಾಗುತ್ತದೆ ಎಂಬ ಹೇಳಿಕೆಯನ್ನು ಕಾಂಗ್ರೆಸ್ ನಾಯಕಿ, ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಯಶೋಮತಿ ಠಾಕೂರ್ ಸಮರ್ಥಿಸಿಕೊಂಡಿದ್ದಾರೆ.

ಗೋವನ್ನು ಮುಟ್ಟಿದಾಗ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಇದನ್ನು ನಮ್ಮ ಸಂಸ್ಕೃತಿಯೇ ಹೇಳಿದೆ ಎಂದು ಅಮರಾವತಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅವರು ಹೇಳಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಈ ಕುರಿತು ಪಿಟಿಐ ಸುದ್ದಿಸಂಸ್ಥೆಗೆ ಭಾನುವಾರ ಪ್ರತಿಕ್ರಿಯೆ ನೀಡಿದ ಅವರು, ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

‘ಗೋವು ಪವಿತ್ರವಾದ ಪ್ರಾಣಿ. ದನ ಇರಲಿ ಅಥವಾ ಇತರ ಯಾವುದೇ ಪ್ರಾಣಿಯಾಗಲಿ ಅವುಗಳನ್ನು ಸ್ಪರ್ಶಿಸಿದಾಗ ನಮ್ಮಲ್ಲಿ ಸಹಾನುಭೂತಿ ಉಂಟಾಗುತ್ತದೆ. ನಾನು ಹೇಳಿದ್ದರಲ್ಲಿ ತಪ್ಪೇನಿದೆ’ ಎಂದು ಅವರು ಪ್ರಶ್ನಿಸಿದ್ದಾರೆ.

ಇದೇ ಮೊದಲಲ್ಲ: ವಾಶಿಮ್ ಜಿಲ್ಲಾ ಪರಿಷತ್ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಯಶೋಮತಿ, ‘ನಾವಿಗಷ್ಟೇ ಅಧಿಕಾರಕ್ಕೆ ಬಂದಿದ್ದೇವೆ. ನಮ್ಮ ಜೇಬುಗಳು ಇನ್ನೂ ಬೆಚ್ಚಗಾಗಿಲ್ಲ’ ಎಂದು ಹೇಳಿದ್ದರು.

‘ಮತದಾರರು ಪ್ರತಿಪಕ್ಷದಿಂದ ಹಣ ಸ್ವೀಕರಿಸಬಹುದು. ಆದರೆ ಮತ ಮಾತ್ರ ಕಾಂಗ್ರೆಸ್‌ಗೇ ನೀಡಿ’ ಎಂದೂ ಹೇಳಿದ್ದರು. ಈ ಹೇಳಿಕೆಗಳೂ ವಿವಾದಕ್ಕೀಡಾಗಿದ್ದವು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು