ಆಧ್ಯಾತ್ಮ ಗುರು ದಾದಾ ವಾಸ್ವಾನಿ ನಿಧನ 

7

ಆಧ್ಯಾತ್ಮ ಗುರು ದಾದಾ ವಾಸ್ವಾನಿ ನಿಧನ 

Published:
Updated:

ಪುಣೆ: ಸಾಧು ವಾಸ್ವಾನಿ ಮಿಶನ್‌ ಮುಖ್ಯಸ್ಥ ಹಾಗೂ ಪ್ರಖ್ಯಾತ ಆಧ್ಯಾತ್ಮ ಗುರು ದಾದಾ ಜೆ.ಪಿ. ವಾಸ್ವಾನಿ (99) ಅವರು ಗುರುವಾರ ನಿಧನರಾಗಿದ್ದಾರೆ. 

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸಸ್ಯಾಹಾರ ಉತ್ತೇಜಿಸಲು ಮತ್ತು ಪ್ರಾಣಿ ಹಕ್ಕುಗಳ ಪ್ರಚಾರಕರಾಗಿ ಗುರುತಿಸಿಕೊಂಡಿದ್ದರು. ಜತೆಗೆ, ಅವರು 150ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.

2017ರಲ್ಲಿ ವಾಸ್ವಾನಿ ಅವರ 99 ಹುಟ್ಟುಹಬ್ಬದ ಅಂಗವಾಗಿ ಪ್ರಧಾನಿ ಮೋದಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಶುಭ ಹಾರೈಸಿದ್ದರು. 

ಮುಂದಿನ ತಿಂಗಳ ಶತಾಯುಷಿ ಆಗಲಿದ್ದ ವಾಸ್ವಾನಿ ಅವರ 100ನೇ ಹುಟ್ಟು ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲು ಮಿಶನ್‌ ಸಕಲ ಸಿದ್ಧತೆ ಮಾಡಿಕೊಂಡಿತ್ತು.

ದಾದಾ ವಾಸ್ವಾನಿ ಅವರು ಸೆಪ್ಟೆಂಬರ್‌ 2, 1918 ಪಾಕಿಸ್ತಾನದ ಹೈದರಾಬಾದ್‌ನಲ್ಲಿ ಸಿಂಧಿ ಕುಟುಂಬದಲ್ಲಿ ಜನಿಸಿದ್ದರು. 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !