ಶಾಲೆ ಬಳಿ ಮೊಬೈಲ್‌ ಗೋಪುರ: ರಾಜ್ಯದ ನಿರ್ಬಂಧಕ್ಕೆ ಆಕ್ಷೇಪ‍

ಬುಧವಾರ, ಜೂಲೈ 24, 2019
28 °C

ಶಾಲೆ ಬಳಿ ಮೊಬೈಲ್‌ ಗೋಪುರ: ರಾಜ್ಯದ ನಿರ್ಬಂಧಕ್ಕೆ ಆಕ್ಷೇಪ‍

Published:
Updated:

ನವದೆಹಲಿ: ಶಾಲೆಗಳು, ಪಾರಂಪರಿಕ ಕಟ್ಟಡಗಳು, ಧಾರ್ಮಿಕ ಸ್ಥಳಗಳ ಸಮೀಪ ಮೊಬೈಲ್‌ ಗೋಪುರಗಳನ್ನು ಅಳವಡಿಸಲು ಕರ್ನಾಟಕ ಸರ್ಕಾರ ನಿರ್ಬಂಧ ಹೇರಿರುವುದಕ್ಕೆ ದೂರಸಂಪರ್ಕ ಇಲಾಖೆಯು ಆಕ್ಷೇಪ ವ್ಯಕ್ತಪಡಿಸಿದೆ.

ಮೊಬೈಲ್‌ ಸಂಪರ್ಕಜಾಲವನ್ನು ವಿಸ್ತರಿಸಲು ಕೇಂದ್ರದ ನಿಯಮಗಳಿಗೆ ಪೂರಕವಾಗಿ ನಿಯಮಗಳನ್ನು ಪರಿಷ್ಕರಿಸಬೇಕು ಎಂದು ಮನವಿ ಮಾಡಿದೆ. ಇಲಾಖೆಯ ಕಾರ್ಯದರ್ಶಿ ಅರುಣಾ ಸುಂದರರಾಜನ್‌, ಈ ಸಂಬಂಧ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರಿಗೆ ಪತ್ರ ಬರೆದಿದ್ದಾರೆ.

ಕೇಂದ್ರ ಸರ್ಕಾರದ ನಿಯಮಗಳ ಅನುಸಾರ ಶಾಲೆ, ಪಾರಂಪರಿಕ ಕಟ್ಟಡಗಳು, ಧಾರ್ಮಿಕ ಕೇಂದ್ರಗಳ ಬಳಿ ಮೊಬೈಲ್‌ ಗೋಪುರ ಅಳವಡಿಸಲು ಯಾವುದೇ ನಿರ್ಬಂಧವಿಲ್ಲ ಎಂಬುದನ್ನು ಉಲ್ಲೇಖಿಸಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಗೋಪುರ ಅಳವಡಿಸಲು ನಿಗದಿಪಡಿಸಿರುವ ಶುಲ್ಕವು ಕೇಂದ್ರ ಸರ್ಕಾರ ಸಲಹೆ ಮಾಡಿದ್ದಕ್ಕಿಂತಲೂ 10 ಪಟ್ಟು ಹೆಚ್ಚಿದೆ ಎಂಬುದರ ಬಗ್ಗೆಯೂ ಅವರು ತಕರಾರು ತೆಗೆದಿದ್ದಾರೆ.

ನಿಯಮಗಳ ಪ್ರಕಾರ, ರಾಜ್ಯದಲ್ಲಿ ಕಂಪನಿಗಳು ₹ 15,000ದಿಂದ ₹ 1 ಲಕ್ಷವರೆಗೂ ಶುಲ್ಕ ಪಾವತಿಸಬೇಕು. ಕೇಂದ್ರ ಸರ್ಕಾರದ ಅಧಿಸೂಚನೆ ಅನುಸಾರ ಈ ಶುಲ್ಕ ₹ 10,000 ಎಂದು ಹೇಳಿದ್ದಾರೆ. ಶೀಘ್ರ ನಿಯಮಗಳನ್ನು ಪರಿಷ್ಕರಿಸಬೇಕು ಎಂದೂ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !