ಬಿಜೆಡಿ ತೊರೆದ ಜಯ ಪಾಂಡಾ ಬಿಜೆಪಿಗೆ

ಮಂಗಳವಾರ, ಮಾರ್ಚ್ 26, 2019
33 °C

ಬಿಜೆಡಿ ತೊರೆದ ಜಯ ಪಾಂಡಾ ಬಿಜೆಪಿಗೆ

Published:
Updated:
Prajavani

ನವದೆಹಲಿ: ಬಿಜು ಜನತಾದಳ ಮಾಜಿ ಸಂಸದ ವೈಜಯಂತ್ ಜಯ ಪಾಂಡಾ ಅವರು ಸೋಮವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಒಡಿಶಾದಲ್ಲಿ ಬಿಜೆಪಿ ಶಕ್ತಿ ಹೆಚ್ಚಿದಂತಾಗಿದೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಪಾಂಡಾ ಸೋಮವಾರ ಇಲ್ಲಿ ಭೇಟಿಯಾದರು. ಒಡಿಶಾ ಬಿಜೆಪಿ ಘಟಕದ ಮುಖಂಡರು, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಜುಯೆಲ್ ಓರಮ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. 

ನವೀನ್ ಪಟ್ನಾಯಕ್ ನೇತೃತ್ವದ ಒಡಿಶಾ ಸರ್ಕಾರದ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ಪಾಂಡಾ ವಾಗ್ದಾಳಿ ನಡೆಸಿದರು. ‘ರಾಜ್ಯದಲ್ಲಿ ಬದಲಾವಣೆ ಬೇಕಿದ್ದು, ಅದು ಬಿಜೆಪಿಯಿಂದ ಮಾತ್ರ ಸಾಧ್ಯ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಪಾಂಡಾ ಅವರ ಸೇರ್ಪಡೆಯಿಂದ ರಾಜ್ಯದ ಕರಾವಳಿಯಲ್ಲಿ ಪಕ್ಷದ ಪ್ರಾಬಲ್ಯ ಹೆಚ್ಚಲಿದೆ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !