ನೈಜೀರಿಯಾದಲ್ಲಿ ಐವರು ಭಾರತೀಯ ನಾವಿಕರ ಅಪಹರಣ

ಭಾನುವಾರ, ಮೇ 26, 2019
27 °C
ಸುರಕ್ಷಿತ ಬಿಡುಗಡೆ: ರಾಯಭಾರಿಗೆ ಸಚಿವೆ ಸುಷ್ಮಾ ಸ್ವರಾಜ್‌ ಸೂಚನೆ

ನೈಜೀರಿಯಾದಲ್ಲಿ ಐವರು ಭಾರತೀಯ ನಾವಿಕರ ಅಪಹರಣ

Published:
Updated:

ನವದೆಹಲಿ: ಕರ್ತವ್ಯದ ಮೇಲೆ ನೈಜೀರಿಯಾದಲ್ಲಿರುವ ಐವರು ಭಾರತೀಯ ನಾವಿಕರನ್ನು ಕಡಲ್ಗಳ್ಳರು ಅಪಹರಣ ಮಾಡಿದ್ದಾರೆ.

ಈ ವಿಷಯವನ್ನು ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್‌ ಅವರು ದೃಢಪಡಿಸಿದ್ದು, ಅಪಹೃತರ ಸುರಕ್ಷಿತ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ನೈಜೀರಿಯಾದಲ್ಲಿನ ಭಾರತದ ರಾಯಭಾರಿ ಅಭಯ್‌ ಠಾಕೂರ್‌ ಅವರಿಗೆ ಸೂಚನೆ ನೀಡಿದ್ದಾರೆ.

ಈ ನಾವಿಕರನ್ನು ಎರಡು ವಾರಗಳ ಹಿಂದೆಯೇ ಅಪಹರಣ ಮಾಡಲಾಗಿದೆ ಎಂದು ಹೇಳಲಾಗಿದ್ದು, ಹಲವು ದಿನಗಳಿಂದ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಅಪಹರಣಗೊಂಡವರ ಕುಟುಂಬಗಳು ತಿಳಿಸಿವೆ.

‘ಎಂ.ಟಿ ಅಪೇಕಸ್‌ ಹಡಗಿನಿಂದ ನನ್ನ ಪತಿ ಸುದೀಪ್‌ಕುಮಾರ ಚೌಧರಿ ಅವರನ್ನು ಅಪಹರಿಸಲಾಗಿದೆ’ ಎಂದು ಚೌಧರಿ ಪತ್ನಿ ಭಾಗಶ್ರೀ ದಾಸ್‌ ಟ್ವಿಟ್ಟರ್‌ ಮೂಲಕ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಮಾಹಿತಿ ನೀಡಿದ್ದಾರೆ.

ಈ ನಡುವೆ, ‘ನೈಜೀರಿಯಾ ನೌಕಾಪಡೆ ಅಧಿಕಾರಿಗಳು ಹಾಗೂ ಪೊಲೀಸರೊಂದಿಗೆ ಸತತ ಸಂಪರ್ಕದಲ್ಲಿದ್ದು, ಅಪಕರಣಕಾರರೊಂದಿಗೂ ಸಂಪರ್ಕ ಸಾಧಿಸಲಾಗಿದೆ’ ಎಂದು ನೈಜೀರಿಯಾದಲ್ಲಿನ ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಮಾಹಿತಿ ನೀಡಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !