ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀರಾ ಗ್ರೂಪ್‌ ನಿರ್ದೇಶಕಿ ನೌಹೆರಾ ಶೇಕ್‌ ಬಂಧನ

Last Updated 16 ಅಕ್ಟೋಬರ್ 2018, 16:47 IST
ಅಕ್ಷರ ಗಾತ್ರ

ಹೈದರಾಬಾದ್‌: ಚಿನ್ನದ ಯೋಜನೆಗಳ ಮೂಲಕ ಹೆಚ್ಚಿನ ಪ್ರಮಾಣದ ಬಡ್ಡಿ ನೀಡುವುದಾಗಿ ಸಾರ್ವಜನಿಕರಿಂದ ಠೇವಣಿ ಪಡೆದು ಹಣ ಮರುಪಾವತಿಸದ ಆರೋಪದ ಮೇಲೆ ಹೀರಾ ಸಮೂಹ ಸಂಸ್ಥೆಗಳ ನಿರ್ದೇಶಕಿ ಹಾಗೂ ರಾಜಕೀಯ ಪಕ್ಷವೊಂದರ ಮುಖ್ಯಸ್ಥೆ ನೌಹೆರಾ ಶೇಕ್‌ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೀರಾ ಸಮೂಹ ಸಂಸ್ಥೆ15 ಬೇರೆ ಬೇರೆ ಹೆಸರಿನಲ್ಲಿದೇಶದ ವಿವಿಧ ರಾಜ್ಯಗಳನ್ನು ವ್ಯಾಪಿಸಿದೆ. ಕಂಪನಿಯ ಶಾಖೆಗಳ ಮೂಲಕ ಠೇವಣಿದಾರರಿಗೆ ವಂಚನೆ ಮಾಡಿದೆ. ಶೇಕ್‌ ಅವರನ್ನು ನವದೆಹಲಿಯಲ್ಲಿ ಸೋಮವಾರ ಬಂಧಿಸಲಾಗಿದ್ದು, ಹಸ್ತಾಂತರ ವಾರಂಟ್‌ ಪಡೆದು ಮಂಗಳವಾರ ಹೈದರಾಬಾದ್‌ಗೆ ಕರೆತರಲಾಗಿದೆ ಎಂದು ಪೊಲೀಸ್‌ ಪ್ರಕಟಣೆ ತಿಳಿಸಿದೆ.

‘ಹೀರಾ ಗ್ರೂಪ್‌ನ ಬಹುತೇಕ ಕಂಪನಿಗಳು ಚಿನ್ನದ ಯೋಜನೆ ಪ್ರಕಟಿಸಿ ಸಾವಿರಾರು ಠೇವಣಿದಾರರಿಗೆ ಕಂಪನಿ ವಂಚಿಸಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಈ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ನೌಹೆರಾ ಅವರ ರಾಜಕೀಯ ಪಕ್ಷ ಸ್ಪರ್ಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT