ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಸೇವನೆ ಭಾರತದಲ್ಲಿ ಶೇ 38 ಹೆಚ್ಚಳ

ಆಧಾರ: ಲ್ಯಾನ್ಸೆಟ್ ಜರ್ನಲ್‌
Last Updated 8 ಮೇ 2019, 19:12 IST
ಅಕ್ಷರ ಗಾತ್ರ

ಬರ್ಲಿನ್: ಜಾಗತಿಕ ಮಟ್ಟದಲ್ಲಿಮದ್ಯ ಸೇವನೆ ಕುರಿತುಜರ್ಮನಿಯ ಡ್ರೆಸ್ಡನ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿರುವ ಅಧ್ಯಯನ ವರದಿ‘ದಿ ಲಾನ್ಸೆಟ್ ಜರ್ನಲ್‌’ನಲ್ಲಿ ಪ್ರಕಟವಾಗಿದೆ. 2025ರ ಹೊತ್ತಿಗೆ ಜಾಗತಿಕವಾಗಿ ಮದ್ಯ ಸೇವನೆ ಪ್ರಮಾಣವನ್ನು ಶೇ 10ರಷ್ಟು ಕಡಿಮೆ ಮಾಡಲು ವಿಶ್ವಸಂಸ್ಥೆ ಗುರಿ ಇರಿಸಿಕೊಂಡಿದೆ. ಆದರೆ ಈಗಿನ ಸ್ಥಿತಿ ಗಮನಿಸಿದರೆ ಈ ಗುರಿ ತಲುಪುವುದು ಅಸಾಧ್ಯ ಎಂದು ಸಂಶೋಧಕರು ಈ ವರದಿಯಲ್ಲಿ ಹೇಳಿದ್ದಾರೆ.

ವರದಿಯಲ್ಲೇನಿದೆ?

* ಮದ್ಯ ಸೇವನೆಯಿಂದ ನಿರ್ದಿಷ್ಟವಾಗಿ ಸಾಂಕ್ರಾಮಿಕ ರೋಗಗಳು ಸೇರಿದಂತೆ 200ಕ್ಕೂ ಹೆಚ್ಚು ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ.

* 1990ಕ್ಕೂ ಮೊದಲು, ಹೆಚ್ಚು ಆದಾಯವಿರುವ ದೇಶಗಳಲ್ಲಿಯೇ ಮದ್ಯ ಸೇವನೆ ಪ್ರಮಾಣ ಅಧಿಕವಾಗಿ ಇರುತ್ತಿತ್ತು. ಯುರೋಪ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು.

* ನಂತರದಲ್ಲಿ ಪರಿಸ್ಥಿತಿ ಬದಲಾಗಿದ್ದು, ಭಾರತ, ಚೀನಾ, ವಿಯೆಟ್ನಾಂ ಸೇರಿದಂತೆ ಕಡಿಮೆ ಹಾಗೂ ಮಧ್ಯಮ ಪ್ರಮಾಣದ ಆದಾಯವಿರುವ ರಾಷ್ಟ್ರಗಳಲ್ಲಿ ಮದ್ಯ ಸೇವನೆ ಪ್ರಮಾಣ ಹೆಚ್ಚಳವಾಗುತ್ತಿದೆ.

* ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್‌ ಅಧ್ಯಯನದ ಮಾಹಿತಿ ಆಧರಿಸಿ ತಲಾವಾರು ಮದ್ಯ ಸೇವನೆ ಪ್ರಮಾಣ ಲೆಕ್ಕ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT