ಗುರುವಾರ , ಡಿಸೆಂಬರ್ 5, 2019
20 °C

ಜೈಪುರದ 21ರ ಹರೆಯದ ಮಯಾಂಕ್ ದೇಶದ ಅತಿ ಕಿರಿಯ ನ್ಯಾಯಮೂರ್ತಿ

ಎಎನ್‌ಐ Updated:

ಅಕ್ಷರ ಗಾತ್ರ : | |

 Mayank Pratap Singh

ಜೈಪುರ: ರಾಜಸ್ಥಾನದ 21 ವರ್ಷದ ಮಯಾಂಕ್ ಪ್ರತಾಪ್ ಸಿಂಗ್ ರಾಜಸ್ಥಾನ ನ್ಯಾಯಾಂಗ ಸೇವಾ ಪರೀಕ್ಷೆಯಲ್ಲಿ ಪಾಸಾಗಿದ್ದು, ದೇಶದ ಅತಿ ಕಿರಿಯ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಮಾಜದಲ್ಲಿ ನ್ಯಾಯಮೂರ್ತಿಗಳಿಗಿರುವ ಪ್ರಾಧಾನ್ಯ ಮತ್ತು ಗೌರವವನ್ನು ನೋಡಿ ನನಗೆ ನ್ಯಾಯಾಂಗ ಸೇವೆ ಬಗ್ಗೆ ಆಸಕ್ತಿ ಹುಟ್ಟಿತು. ನಾನು ರಾಜಸ್ಥಾನ ಯುನಿವರ್ಸಿಟಿಯಲ್ಲಿ 5 ವರ್ಷದ ಎಲ್‌ಎಲ್‌ಬಿ ಕೋರ್ಸ್‌ಗೆ 2014ರಲ್ಲಿ ಸೇರಿದ್ದೆ. ಇದು ಈವರ್ಷ ಮುಗಿಯಿತು ಎಂದು ಸಿಂಗ್ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ನನ್ನ ಕುಟುಂಬ,  ಶಿಕ್ಷಕರು ಮತ್ತು ಹಿತೈಷಿಗಳ ಸಹಕಾರದಿಂದ ಮೊದಲ ಪ್ರಯತ್ನದಲ್ಲಿಯೇ ನಾನು ಪರೀಕ್ಷೆ ಪಾಸಾದೆ ಎಂದಿದ್ದಾರೆ ಸಿಂಗ್.

ನ್ಯಾಯಾಂಗ ಸೇವಾ ಪರೀಕ್ಷೆ ಬರೆಯಲು 23 ವರ್ಷ ಆಗಿರಬೇಕು. ಆದರೆ ಈ ವರ್ಷ ರಾಜಸ್ಥಾನ ಹೈಕೋರ್ಟ್ ವಯೋಮಿತಿಯನ್ನು 21ಕ್ಕೆ ಇಳಿಸಿತ್ತು.  

ಈ ರೀತಿ ವಯೋಮಿತಿ ಇಳಿಸಿರುವುದರಿಂದ ಹೆಚ್ಚಿನ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತವೆ ಮತ್ತು ವೃತ್ತಿಯಲ್ಲಿ ಹೆಚ್ಚಿನ ಸಾಧನೆ ಸಾಧ್ಯ. ಪರೀಕ್ಷೆ ಬರೆಯಲು ಇರುವ ವಯೋಮಿತಿ ಇಳಿಕೆ ಮಾಡಿದ್ದರಿಂದಲೇ ನಾನು ಪರೀಕ್ಷೆ ಬರೆದೆ. ಕಲಿಯಲು ಮತ್ತು ಕೆಲಸ ಮಾಡಲು ಇದು ನನಗೆ ಸಹಕಾರಿಯಾಗಲಿದೆ. ನಾನು ಕಿರಿಯ ವಯಸ್ಸಿನಲ್ಲಿ ವೃತ್ತಿ ಆರಂಭಿಸುವ ಮೂಲಕ ನನಗೆ ಹೆಚ್ಚಿನ ಸಮಾಜ ಸೇವೆ ಮಾಡಲು ಅವಕಾಶ ಸಿಗುತ್ತದೆ ಎಂದು ಸಿಂಗ್ ಹೇಳಿದ್ದಾರೆ.
 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು