7

ಜಿಯೊ ಇನ್ಸ್‌ಟಿಟ್ಯೂಟ್‌ಗೆ ಮನ್ನಣೆ: ಎಚ್‌ಆರ್‌ಡಿ ಸಮರ್ಥನೆ

Published:
Updated:

ನವದೆಹಲಿ (ಪಿಟಿಐ): ರಿಲಯನ್ಸ್‌ ಪ್ರತಿಷ್ಠಾನದ ಜಿಯೊ ಇನ್ಸ್‌ಟಿಟ್ಯೂಟ್‌ಗೆ ‘ಉತ್ಕೃಷ್ಟ ಸಂಸ್ಥೆ’ (ಐಒಇ) ಮನ್ನಣೆ ನೀಡಿರುವುದನ್ನು ಮಾನವ ಸಂ‍ಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯ ಸಮರ್ಥಿಸಿಕೊಂಡಿದೆ. ಈ ಮನ್ನಣೆ ಷರತ್ತುಬದ್ಧ,  ಈಗ ಈ ಸಂಸ್ಥೆಗೆ ‘ಮನ್ನಣೆ ನೀಡುವ ಇಂಗಿತ ಇದೆ’ ಎಂಬ ಪತ್ರವನ್ನು ಮಾತ್ರ ನೀಡಲಾಗುವುದು ಎಂದು ತಿಳಿಸಿದೆ.

‘ಜಿಯೊ ಇನ್ಸ್‌ಟಿಟ್ಯೂಟ್‌ಗೆ ಈಗ ಐಒಇ ಮನ್ನಣೆ ನೀಡಲಾಗುವುದಿಲ್ಲ. ಮೂರು ವರ್ಷದೊಳಗೆ ಸಂಸ್ಥೆ ಸ್ಥಾಪನೆಯಾಗಿ ತಜ್ಞರ ಸಮಿತಿಯ ನಿರೀಕ್ಷೆಗಳಿಗೆ ತಕ್ಕಂತೆ ಇದ್ದರೆ ಮಾತ್ರ ಐಒಇ ಸ್ಥಾನ ನೀಡಲಾಗುವುದು. ಸಂಸ್ಥೆಯ ಕಾರ್ಯಕ್ಷಮತೆಯು ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂದು ತಜ್ಞರ ಸಮಿತಿಯು ಭಾವಿಸಿದರೆ ಐಒಇ ಸ್ಥಾನ ರದ್ದುಪಡಿಸಲಾಗುವುದು’ ಎಂದು ಎಚ್‌ಆರ್‌ಡಿ ಕಾರ್ಯದರ್ಶಿ ಆರ್‌. ಸುಬ್ರಮಣಿಯಂ ಹೇಳಿದ್ದಾರೆ. 

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಸೇರಿ ಸರ್ಕಾರಿ ಸ್ವಾಮ್ಯದ ಮೂರು ಮತ್ತು ಖಾಸಗಿ ವಲಯದ ಮೂರು ಸಂಸ್ಥೆಗಳಿಗೆ ಐಒಇ ಮನ್ನಣೆಯನ್ನು ಸರ್ಕಾರ ಸೋಮವಾರ ಘೋಷಿಸಿತ್ತು. 

ಆದರೆ ಇನ್ನಷ್ಟೇ ಆರಂಭ ಆಗಬೇಕಿರುವ ಜಿಯೊ ಇನ್ಸ್‌ಟಿಟ್ಯೂಟ್‌ಗೆ ಈ ಸ್ಥಾನ ನೀಡಿದ್ದಕ್ಕೆ ಸಮಾಜದ ವಿವಿಧ ವಲಯಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಆಯ್ಕೆ ಪ್ರಕ್ರಿಯೆ ಮತ್ತು ಜಿಯೊ ಇನ್ಸ್‌ಟಿಟ್ಯೂಟ್‌ ಆಯ್ಕೆಯ ಹಿಂದಿನ ಉದ್ದೇಶದ ಬಗ್ಗೆ ಪ್ರಶ್ನೆಗಳೆದ್ದಿವೆ. 

ಬರಹ ಇಷ್ಟವಾಯಿತೆ?

 • 1

  Happy
 • 3

  Amused
 • 0

  Sad
 • 3

  Frustrated
 • 2

  Angry

Comments:

0 comments

Write the first review for this !