ಗುರುವಾರ , ಡಿಸೆಂಬರ್ 5, 2019
20 °C

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ ಸಲಹೆ ಪಡೆದ ಕಮಲ್‌ ಹಾಸನ್‌

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ಮಕ್ಕಳ್‌ ನೀಧಿ ಮೈಯಮ್‌ (ಎಂಎನ್ಎಂ) ಪಕ್ಷದ ಮುಖ್ಯಸ್ಥ ಹಾಗೂ ನಟ ಕಮಲ್ ಹಾಸನ್ ಅವರು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಬುಧವಾರ ಇಲ್ಲಿ ಭೇಟಿ ಮಾಡಿ, ಸಲಹೆ ಪಡೆದಿದ್ದಾರೆ.

‘ಒಬ್ಬ ಅಭಿಮಾನಿಯಾಗಿ ಬಿಜೆಡಿ ಹಿರಿಯ ನಾಯಕನನ್ನು ಭೇಟಿ ಮಾಡಿದೆ. ಅವರಿಂದ ಸಲಹೆಗಳನ್ನು ಪಡೆದುಕೊಂಡೆ’ ಎಂದು ಕಮಲ್‌ ಹಾಸನ್‌ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಪಾಟ್ನಾಯಕ್ ಅವರು ಸಹ ರಾಜಕೀಯಕ್ಕೆ ಬಂದಾಗ ಆರಂಭದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಆದರೆ, ಈಗ ನಿರೀಕ್ಷೆಗೂ ಮೀರಿ ಸಾಧಿಸಿದ್ದಾರೆ. ಉತ್ತಮ ಆಡಳಿತದ ಜತೆಗೆ ಒಳ್ಳೆಯ ಯೋಜನೆಗಳನ್ನು ಜನತೆಗೆ ಕೊಡುತ್ತಿದ್ದಾರೆ. ವಿಪತ್ತು ನಿರ್ವಹಣೆಯಲ್ಲಿ ಅವರು ಅನುಸರಿಸುತ್ತಿರುವ ವಿಧಾನ ಅತ್ಯುತ್ತಮವಾಗಿದೆ. ಅವರಿಂದ ನಾವು ಕಲಿಯಬೇಕಾದದ್ದು ಸಾಕಷ್ಟಿದೆ’ ಎಂದು ಕಮಲ್ ಹಾಸನ್, ಒಡಿಶಾ ಮುಖ್ಯಮಂತ್ರಿಯ ಗುಣಗಾನ ಮಾಡಿದ್ದಾರೆ.

ಹೆಚ್ಚುತ್ತಿರುವ ಇಂಧನ ಬೆಲೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ಬೆಲೆ ಏರಿಕೆ ಇದೇ ರೀತಿ ಮುಂದುವರಿದರೆ ಸಾಮಾನ್ಯ ವಸ್ತುಗಳ ಬೆಲೆಯೂ ಏರಿಕೆಯಾಗಲಿದೆ. ಹಾಗಾಗಿ ತಕ್ಷಣವೇ ಇಂಧನ ಬೆಲೆ ಏರಿಕೆ ತಗ್ಗಿಸಬೇಕು’ ಎಂದು ಒತ್ತಾಯಿಸಿದರು.
 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು