'ಪರಾಶಕ್ತಿ' ಸಿನಿಮಾದ ಚಿತ್ರಕಥೆ ಮೂಲಕ ಮೋಡಿ ಮಾಡಿದ್ದ ಕರುಣಾನಿಧಿ

7

'ಪರಾಶಕ್ತಿ' ಸಿನಿಮಾದ ಚಿತ್ರಕಥೆ ಮೂಲಕ ಮೋಡಿ ಮಾಡಿದ್ದ ಕರುಣಾನಿಧಿ

Published:
Updated:

 'ಓಡಿನಾಲ್ ಓಡಿನಾಲ್ ವಾಳ್ಗೈಯಿರ್ ಓರಾತ್ತಿರಿಕ್ಕೈ ಓಡಿನಾಳ್'  -1952ರಲ್ಲಿ ಬಿಡುಗಡೆಯಾಗಿ ತಮಿಳ್ನಾಡಿನಲ್ಲಿ ಸಂಚಲನ ಸೃಷ್ಟಿಸಿದ್ದ ಪರಾಶಕ್ತಿ ಎಂಬ ಸಿನಿಮಾದ ಡೈಲಾಗ್ ಇದು. ಪರಾಶಕ್ತಿ ಸಿನಿಮಾದ ಸಂದರ್ಭಕ್ಕನುಗುಣವಾಗಿ ಮೇಲಿನ ಈ ವಾಕ್ಯವನ್ನು ಅನುವಾದಿಸಿದರೆ ಓಡಿ ಓಡಿ ಬದುಕಿನ ಕೊನೆಯವರೆಗೆ ಓಡಿದವಳು ಎಂಬ ಅರ್ಥ ಬರುತ್ತದೆ.

ಪರಾಶಕ್ತಿ ಸಿನಿಮಾದ ಬಗ್ಗೆ ಹೇಳುವುದಾದರೆ ಇದಕ್ಕೆ ಎರಡು ವಿಶೇಷತೆಗಳಿವೆ. ತಮಿಳ್ನಾಡಿನ ಜನತೆ ಶಿವಾಜಿ ಗಣೇಶನ್ ಎಂಬ ನಟನ ವಿಶ್ವರೂಪವನ್ನು ಕಂಡದ್ದು ಈ ಚಿತ್ರದಲ್ಲಾಗಿತ್ತು. ಇನ್ನೊಂದು ವಿಶೇಷತೆ ಎಂದರೆ ಕರುಣಾನಿಧಿ ಬರೆದ ಚಿತ್ರಕಥೆ.
ಚಲನಚಿತ್ರ ಮಾಧ್ಯಮದಲ್ಲಿ ಹೊಸತೊಂದು ಅಲೆಯನ್ನು ತಂದ ಚಿತ್ರವಾಗಿತ್ತು ಪರಾಶಕ್ತಿ. ಆಕ್ಷನ್ ದೃಶ್ಯಗಳಿಂದ ಗಮನ ಸೆಳೆಯುತ್ತಿರುವುದಕ್ಕಿಂತ ಭಿನ್ನವಾಗಿ ರಾಜಕೀಯ ಆಶಯಗಳುಳ್ಳ ಸಂಭಾಷಣೆಯನ್ನು ಕರುಣಾನಿಧಿ ಬರೆಯುತ್ತಿದ್ದರು. ಅವರ ರಾಜಕೀಯ ನಿಲುವುಗಳು ಈ ರಚನೆಗಳ ಮೂಲಕ ಪ್ರತಿಫಲಿಸುತ್ತಿತ್ತು.

ತಾನು ನಂಬಿದ ಸೋಷ್ಯಲಿಸ್ಟ್ ದ್ರಾವಿಡ ಆಶಯಗಳನ್ನು ತಮ್ಮ ಲೇಖನಗಳ ಮೂಲಕ ಅವರು ವ್ಯಕ್ತ ಪಡಿಸುತ್ತಿದ್ದರು. ತಮಿಳ್ನಾಡಿನ ಮಾಜಿ ಮುಖ್ಯಮಂತ್ರಿಯೂ ಕರುಣಾನಿಧಿಯವರ ಮಾರ್ಗದರ್ಶಕರಾಗಿದ್ದ ಅಣ್ಣಾ ದೊರೈ ಹೊರತು ಪಡಿಸಿದರೆ ಕರುಣಾನಿಧಿಯವರ ರಚನೆಗಳಿಗೆ ಸರಿಸಾಠಿಯಾಗಿ ಯಾರೂ ಬರೆದದ್ದಿಲ್ಲ.

ವಿಧವೆ ಮತ್ತು ಅಬಲೆಯಾದ ಸಹೋದರಿಯ ಮೇಲಿರುವ ಸ್ನೇಹದ ಕತೆಯನ್ನು ಹೇಳುವ ಸಿನಿಮಾ ಆಗಿತ್ತು ಪರಾಶಕ್ತಿ. ಶಿವಾಜಿ ಗಣೇಶನ್ ನಟಿಸಿ ಜನಮಾನಸದಲ್ಲಿ ಉಳಿಯುವಂತೆ ಮಾಡಿದ ಗುಣಶೇಖರ ಎಂಬ ಕಥಾ ಪಾತ್ರ ಎರಡನೇ ಮಹಾಯುದ್ಧ ಕಾಲದಲ್ಲಿ  ಒಂಟಿಯಾದ ಸಹೋದರಿಯನ್ನು ಹುಡುಕಿಕೊಂಡು ಬರುವ ಕಥಾ ಹಂದರವನ್ನು ಹೊಂದಿತ್ತು.

ಚುರುಕಿನ ಸಂಭಾಷಣೆಯನ್ನು ಕೇಳಲಿಕ್ಕಾಗಿಯೇ ಜನರು ಸಿನಿಮಾ ಥಿಯೇಟರ್ ಗೆ ಹೋಗುವಂತೆ ಮಾಡಿದ್ದು ಕರುಣಾನಿಧಿಯವರೇ. ಅವರ ಚಿತ್ರಕಥೆಗಳಲ್ಲಿನ ನೇರ ಮತ್ತು ಸ್ಪಷ್ಟವಾದ ನಿಲುವುಗಳು ಜನರಿಗೆ ಇಷ್ಟವಾಗಿತ್ತು. ವಿಧವಾ ವಿವಾಹ, ಅಸ್ಪೃಶ್ಯತೆ, ಬ್ರಾಹ್ಮಣರ ಅಧಿಕಾರ ದರ್ಪ ಮೊದಲಾದ ವಿಷಯಗಳನ್ನು ಕರುಣಾನಿಧಿ ತೆರೆಗೆ ತಂದರು.

ಹೀಗೆ ನಿರ್ಭಿಡೆಯಾಗಿ ವಿಷಯ ಪ್ರಸ್ತುತಿ ನಡೆಸಿದಾಗ ಹಲವಾರು ಬೆದರಿಕೆಗಳನ್ನೂ ಅವರು ಎದುರಿಸಬೇಕಾಗಿ ಬಂತು. ಸಿನಿಮಾಗಳಿಗೆ ನಿಷೇಧ ಹೇರುವ ಬೆದರಿಕೆಗಳನ್ನೂ ಎದುರಿಸಿದರೂ ಕರುಣಾನಿಧಿ ಜಗ್ಗಲಿಲ್ಲ. ಅವರು ಚಿತ್ರಕಥೆ ಬರೆದ ಪಾನಂ, ತಂಗರತ್ನಂ ಎಂಬೀ ಚಿತ್ರಗಳಲ್ಲಿ  ಆ ದಿಟ್ಟ ನಿಲುವಿನ ಬಗ್ಗೆ ಸ್ಪಷ್ಟ ಉದಾಹರಣೆಗಳು ಸಿಗುತ್ತವೆ.

ಆರೋಪ, ಬೆದರಿಕೆ ನಡುವೆಯೂ ಹರಿತವಾದ ಸಂಭಾಷಣೆಗಳಿಂದ ಜನ ಮನಸ್ಸನ್ನು ಗೆಲ್ಲಲು ಕರುಣಾನಿಧಿ ಅವರಿಗೆ ಸಾಧ್ಯವಾಗಿತ್ತು.  ರಾಜಕುಮಾರಿ ಎಂಬ ಚಿತ್ರದ ಮೂಲಕ ಅವರು ಚಿತ್ರಕಥೆ ಬರೆಯಲು ಆರಂಭಿಸಿದ್ದರು. ಅನಂತರದ ಸಿನಿಮಾಗಳೆಲ್ಲವೂ ಸೂಪರ್ ಹಿಟ್ ಆದವು. ತಮ್ಮದೇ ಆದ ಶೈಲಿಯಲ್ಲಿ, ವಿಪ್ಲವದ ಶಕ್ತಿಯೊಂದಿಗೆ ಶುದ್ಧ ತಮಿಳಿನಲ್ಲಿ ಬರೆಯುವ ಸಾಮರ್ಥ್ಯವೇ ಅವರ ಸಂಭಾಷಣೆಯ ಶಕ್ತಿಯಾಗಿತ್ತು.
 

ಇದನ್ನೂ ಓದಿರಿ
ಕರುಣಾನಿಧಿ ಬದುಕಿನ ಹಾದಿ

'ಪರಾಶಕ್ತಿ' ಸಿನಿಮಾದ ಚಿತ್ರಕಥೆ ಮೂಲಕ ಮೋಡಿ ಮಾಡಿದ್ದ ಕರುಣಾನಿಧಿ

ಕಣ್ಮರೆಯಾದರು ಕರುಣಾನಿಧಿ, ಜಯಲಲಿತಾ: ಬದಲಾಗಲಿದೆಯೇ ದ್ರಾವಿಡ ರಾಜಕಾರಣಮಾಡಿದ್ದ ಕರುಣಾನಿಧಿ

ಕಲೈಂಗರ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ಕೋಲಾರದ ಚಿನ್ನದ ಗಣಿಗೆ ಇಳಿದಿದ್ದ ಕರುಣಾನಿಧಿ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !